‘ಸಂಪುಟದಲ್ಲಿ ಖಾಲಿ ಇರುವ 3 ಸ್ಥಾನಗಳನ್ನು ತುಂಬುವ ಕೆಲಸ ಆಗುತ್ತಿದೆ’

ಮೈಸೂರು: ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ತುಂಬುವ ಕೆಲಸ ಆಗುತ್ತಿದೆ. ಆದ್ರೆ ಹಿರಿಯರಿಗೆ ಕೋಕ್ ಕೊಟ್ಟು ಹೊಸಬರನ್ನು ಸೇರಿಸಿಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಅಲ್ಲ, ಒಂದು‌‌ ರೀತಿ ವಿಸ್ತರಣೆ ರೀತಿ ಆಗುತ್ತೆ. ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ತುಂಬುವ ಕೆಲಸ ಆಗುತ್ತಿದೆ ಎಂದರು. ಇದೇ ವೇಳೆ ಭೇಟಿಗೆ ಬಂದಿದ್ದ ಪುಟ್ಟರಂಗಶೆಟ್ಟಿ ಕಂಡು ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಏನಯ್ಯ ನಿಮ್ಮ ಭಾಗದಲ್ಲಿ ಲೀಡ್ ಕಡಿಮೆ ಬಂದಿದೆಯಂತಲ್ಲ.ಹಿಂಗೆ ಮಾಡಿದ್ರೆ ಹೆಂಗಯ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು. ಆಗ ಸಿದ್ದು ಸಿಡಿಮಿಡಿಗೊಳ್ಳುತ್ತಿದ್ದಂತೆ ಸಚಿವ ಪುಟ್ಟರಂಗಶೆಟ್ಟಿ ಸ್ಥಳದಿಂದ ಕಾಲ್ಕಿತ್ತ ಘಟನೆ ನಡೆಯಿತು.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv