ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಸಿದ್ದರಾಮಯ್ಯ

ಹುಬ್ಬಳ್ಳಿ: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಕೊಪ್ಪಳ, ಧಾರವಾಡ ಮೈಸೂರು ಸೇರಿದಂತೆ ಎಲ್ಲಿಂದಲೂ ಸ್ಪರ್ಧೆ ಮಾಡುವುದಿಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ರಾಜ್ಯಧ್ಯಕ್ಷ ಬಿಎಸ್​​ ಯಡಿಯೂರಪ್ಪ ವಿರುದ್ಧದ ಆಡಿಯೋ ಪ್ರಕರಣ ತನಿಖೆಯ ನಿರ್ಧಾರವನ್ನು ಸಿಎಂ ಹಾಗೂ ಗೃಹ ಸಚಿವರು ತೆಗೆದುಕೊಳ್ಳುತ್ತಾರೆ. ತನಿಖೆ ಅನೌನ್ಸ್ ಮಾಡಿರುವುದು ಸಿಎಂ. ಎಸ್‌ಐಟಿ ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದು ಎಂದರು.

ಲೋಕಸಭಾ ಚುನಾವಣೆಗಾಗಿ ನಮ್ಮ ಪಕ್ಷದಿಂದಲೂ ತಯಾರಿ ನಡೆಯುತ್ತಿದೆ. ನಮ್ಮ ಪಕ್ಷದ ವತಿಯಿಂದ ರಾಯಚೂರಿನಲ್ಲಿ ಸಮಾವೇಶ ಮಾಡಲಾಗಿದೆ. ಮಾರ್ಚ್ 9ರಂದು ಹಾವೇರಿಯಲ್ಲಿ ಸಮಾವೇಶ ನಡೆಸಲಿದ್ದೆೇವೆ. ಅಂದು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದಾರೆ. ಚುನಾವಣೆ ಸಮಾವೇಶ ಹಾಗೂ ಸಿದ್ಧತೆಯಲ್ಲಿ ನಾವೇ ಮುಂದೆ ಇರುವುದು. ಬಿಜೆಪಿಯವರಿಗಿಂತ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ ಎಂದು ಹೇಳಿದ್ರು.

ಸೀಟು ಹಂಚಿಕೆ ವಿಚಾರವಾಗಿ ಇವತ್ತು ಮೊದಲ ಮೀಟಿಂಗ್ ನಡೆಯುತ್ತಿದೆ. ಎರಡು ಪಕ್ಷದ ಪ್ರಮುಖ ನಾಯಕರು ಭಾಗವಹಿಸಿ, ತೀರ್ಮಾನ ಮಾಡ್ತಾರೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುವುದು ಮುಖ್ಯ. ಅದರ ತಳಹದಿಯ ಮೇಲೆ ವಿಚಾರ ಮಾಡಲಾಗುವುದು ಎಂದರು. ಮಂಡ್ಯ ರಾಜಕೀಯ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಸಮಲತಾ ಅಂಬರೀಶ್ ಭೇಟಿಯಾಗಿದ್ದಾರೆ. ಕಾರ್ಯಕರ್ತರು, ಅಂಬಿ ಅಭಿಮಾನಿಗಳು ಚುನಾವಣೆಗೆ ನಿಲ್ಲುವಂತೆ  ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv   Facebook: firstnews.tv Twitter: firstnews.tv