ನಿಖಿಲ್ ಪರ ಸಮಾವೇಶಕ್ಕೆ ನಾನು ಬರಲ್ಲ, ರಾಹುಲ್ ಗಾಂಧಿ ಬಂದಾಗ ಬರ್ತೀನಿ: ಚಲುವರಾಯಸ್ವಾಮಿ

ಬೆಂಗಳೂರು: ‘ಯಾವುದೇ ಕಾರಣಕ್ಕೂ ನಾನು ನಿಖಿಲ್ ಕುಮಾರಸ್ವಾಮಿ ಪರ ಜಂಟಿ ಪ್ರಚಾರಕ್ಕೆ ಬರಲ್ಲ’ ಅಂತಾ ಮಾಜಿ ಶಾಸಕ ಚಲುವರಾಯಸ್ವಾಮಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಲ್ಲಿ ಇಂದು ಸಿದ್ದರಾಮಯ್ಯ ಅವರನ್ನ, ಚೆಲುವರಾಯಸ್ವಾಮಿ ಭೇಟಿಯಾದರು. ಈ ವೇಳೆ ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಸಿದ್ದರಾಮಯ್ಯ, ಚಲುವರಾಯಸ್ವಾಮಿ ಮನವೊಲಿಕೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯರ ಮಾತಿಗೆ ಚಲುವರಾಯಸ್ವಾಮಿ ಬಗ್ಗಲಿಲ್ಲ ಎನ್ನಲಾಗಿದೆ.

ಇನ್ನು, ಚಲುವರಾಯಸ್ವಾಮಿ ಸುಮಲತಾ ಅಂಬರೀಶ್​​ಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ. ಅಲ್ಲದೇ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಶಾಸಕರೂ ಕೂಡ ಸುಮಲತಾ ಅಂಬರೀಶ್​​ಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಸಿದ್ದರಾಮಯ್ಯ, ಇಂದು ಚೆಲುವರಾಯಸ್ವಾಮಿ ಜೊತೆ ಮಾತುಕತೆ ನಡೆಸಿದರು.

ಆದರೆ ನಿಖಿಲ್ ಪರ ಪ್ರಚಾರ ಮಾಡಲು ಅವರು ಒಪ್ಪಲಿಲ್ಲ ಎನ್ನಲಾಗಿದೆ. ಅಲ್ಲದೇ ಇಂದು ನಡೆಯುವ ನಾಗಮಂಗದಲ್ಲಿ ನಡೆಯಲಿರುವ ಜೆಡಿಎಸ್-ಕಾಂಗ್ರೆಸ್​ ಸಮಾವೇಶದಲ್ಲೂ ತಾವು ಭಾಗಿಯಾಗಲ್ಲ ಅಂತಾ ಹೇಳಿದ್ದಾರೆ. ಒಂದು ವೇಳೆ ನೀವು ಸಮಾವೇಶಕ್ಕೆ ಬಾರದಿದ್ರೆ ಹೈಕಮಾಂಡ್ ಸೂಚನೆ ಉಲ್ಲಂಘಿಸಿದಂತಾಗುತ್ತೆ ಎಂದು ಸಿದ್ದರಾಮಯ್ಯ ಕಿವಿ ಮಾತು ಹೇಳಿದಿರೂ ಕ್ಯಾರೇ ಅನ್ನಲಿಲ್ಲ ಎನ್ನಲಾಗಿದೆ. ನಾನು ಇವತ್ತಿನ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಬದಲಾಗಿ ನಾಳೆ ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಅಲ್ಲದೇ ಯಾವುದೇ ಕಾರಣಕ್ಕೂ ನಿಖಿಲ್ ಪರ ಜಂಟಿ ಪ್ರಚಾರಕ್ಕೆ ಬರಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv