ಪುಲ್ವಾಮ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ: ಸಿದ್ದರಾಮಯ್ಯ

ಮೈಸೂರು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿ ನಡೆಸಿರುವುದು ಒಂದು ಅಮಾನುಷವಾದ ಹೇಯ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಹ ಉಗ್ರರ ಬಗ್ಗೆ ಸಾಫ್ಟ್ ಧೋರಣೆ ತೋರಬಾರದು. ಉಗ್ರರ ವಿರುದ್ಧ  ಉಗ್ರವಾದ ಕ್ರಮವನ್ನು ತೆಗೆದುಕೊಳ್ಳಬೇಕು. ನರೇಂದ್ರ ಮೋದಿಯವರು ಹೇಳಿದರು ನಕಲಿ ನೋಟುಗಳು ಉಗ್ರರಿಗೆ ಹೋಗ್ತಿದ್ದವು. ಅದಕ್ಕೇ ನೋಟು ಅಮಾನ್ಯೀಕರಣ ಮಾಡಿದ್ದೇವೆ ಅಂತಾ  ಹೇಳಿದ್ದರು.ಆದ್ರೆ  ಇದ್ರಿಂದ ಏನು ಉಪಯೋಗವಾಗಿದೆ. ಗುಪ್ತಚರ ಇಲಾಖೆ ಟೋಟಲಿ ಫೈಲ್ಯೂರ್ ಆಗಿದೆ. ನಲವತ್ತು ಐವತ್ತು ಜನ ಸಾಯ್ತಾರೆ ಅಂದ್ರೆ ಏನರ್ಥ
2500 ಜನ ಯೋಧರು ಹೋಗ್ತಿದ್ದರು, ಅದೃಷ್ಟಾವಶಾತ್​ ಏನೂ ಆಗಿಲ್ಲ. ಯೋಧರು ನಮಗೋಸ್ಕರ ಕೆಲಸ ಮಾಡ್ತಿದ್ದಾರೆ. ಸರ್ಕಾರ ಕೂಡಲೇ ಉಗ್ರರನ್ನ ಪತ್ತೆ ಹಚ್ಚಬೇಕು. ನಂತರ ಉಗ್ರರ ಅಡಗುತಾಣಗಳನ್ನು ದಾಳಿ ನಡೆಸಿ ಅವರ ನಾಯಕರನ್ನು ನಾಶಪಡಿಸಬೇಕು ಎಂದು ಸಿದ್ದರಾಮಯ್ಯ ಕಿಡಿಕಾರಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv