ಹುಬ್ಬಳ್ಳಿ ಏರ್​​ಪೋರ್ಟ್​​ನಲ್ಲಿ ಮುಖಾಮುಖಿಯಾದ ಮಾಜಿ ಸಿಎಂಗಳು

ಹುಬ್ಬಳ್ಳಿ: ಇಂದು ಬೆಳ್ಳಂಬೆಳಿಗ್ಗೆ ಮಾಜಿ ಸಿಎಂಗಳು ಮುಖಾಮುಖಿಯಾಗಿರುವ ಘಟನೆ ನಡೆಯಿತು. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಬಿ.ಎಸ್‌ ಯಡಿಯೂರಪ್ಪ ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಚಾನಕ್ ಆಗಿ ಮುಖಾಮುಖಿಯಾದರು. ಇಬ್ಬರು ನಾಯಕರು ಪ್ರತ್ಯೇಕವಾಗಿ ಆಗಮಿಸಿದ್ದರು.  ಸಿದ್ದರಾಮಯ್ಯ ಹುಬ್ಬಳ್ಳಿಯಿಂದ ನವಲಗುಂದಗೆ ತೆರಳುತ್ತಿದ್ದರು. ಹಾಗೇ ಬಿ‌.ಎಸ್. ಯಡಿಯೂರಪ್ಪ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ತೆರಳುತ್ತಿದ್ದರು. ಅನಿರೀಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂಗಳು ಎದುರಾದರು. ಈ ವೇಳೆ ಇಬ್ಬರೂ ನಾಯಕರು ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿ, ಹೊರಟು ಹೋದರು.


Follow us on:

YouTube: firstNewsKannada  Instagram: firstnews.tv   Facebook: firstnews.tv Twitter: firstnews.tv