ವೈದ್ಯಕೀಯ ತಪಾಸಣೆಗಾಗಿ ಬಿಜಿಎಸ್​ಗೆ ಬಂದ ಶತಾಯುಷಿ ಶಿವಕುಮಾರ ಶ್ರೀ

ಬೆಂಗಳೂರು: ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುವ ಸಿದ್ದಗಂಗಾ ಶ್ರೀ, ಶತಾಯುಷಿ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಸದ್ಯ ಜನರಲ್ ಚೆಕಪ್​ಗಾಗಿ‌ ಶ್ರೀಗಳು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದು, ಡಾ‌.ರವೀಂದ್ರ ಅವರು ಸ್ವಾಮಿಜಿಗೆ ಚಿಕಿತ್ಸೆ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಶತಾಯುಷಿ ಶಿವಕುಮಾರ ಸ್ವಾಮೀಜಿಯವರು ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋಗಿದ್ದಾರೆ. ಶ್ರೀಗಳಿಗೆ ಕಳೆದ ಜನವರಿಯಲ್ಲಿ ಮೂರು‌ ಸ್ಟಂಟ್​ ಅಳವಡಿಸಲಾಗಿತ್ತು. ಈ ಹಿಂದೆಯೂ ಅವರಿಗೆ ಸ್ಟಂಟ್​ ಹಾಕಲಾಗಿದ್ದು, ಈಗಾಗಲೇ ಸ್ವಾಮೀಜಿ ದೇಹದೊಳಗೆ ಒಟ್ಟು ಎಂಟು ಸ್ಟಂಟ್​ಗಳನ್ನು ಅಳವಡಿಸಲಾಗಿದೆ. ಶ್ರೀಗಳ ಜೊತೆ ಕಿರಿಯ ಶ್ರೀಗಳು ಕೂಡ ಆಗಮಿಸಿದ್ದು, ಮಠದಿಂದಲೇ ಶ್ರೀಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv