ದಸರಾ: ನಾಡದೇವತೆ ಚಾಮುಂಡೇಶ್ವರಿಗೆ ಶುದ್ಧಿ ಕಾರ್ಯ

ಮೈಸೂರು: ಮೈಸೂರು ದಸರಾ ಮಹೋತ್ಸವ 2018 ಹಿನ್ನೆಲೆಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಶುದ್ಧಿ ಕಾರ್ಯ ಮಾಡಲಾಯಿತು. ಇನ್ನು ನಾಳೆ ಸುಧಾ ಮೂರ್ತಿ ಅವರಿಂದ ದಸರಾ ಉದ್ಘಾಟನೆಯಾಗುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಜೇನು ತುಪ್ಪ ,ಹಾಲು, ಪಂಚಾಮೃತಗಳಿಂದ ಶಾಸ್ತ್ರೋಕ್ತವಾಗಿ ಶುದ್ಧಿ ಕಾರ್ಯ ಮಾಡಲಾಗಿದೆ. ಶುದ್ಧಿ ಮಾಡಿರೋ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ  ಮೂಲಕ ದಸರಾ ಕಾರ್ಯಕ್ರಮಕ್ಕೆ ಸುಧಾ ನಾರಾಯಣ ಮೂರ್ತಿ ಅವರು ಚಾಲನೆ ನೀಡಲಿದ್ದಾರೆ. ಚಾಮುಂಡೇಶ್ವರಿ ಚಿನ್ನದ ವಿಗ್ರಹಕ್ಕೆ ನಾಳೆಯಿಂದ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ  ಸೇರಿದಂತೆ ವಿಶೇಷ ಅಲಂಕಾರ ಮಾಡಲಾಗುವುದು. ನಾಳೆ ಬೆಳಿಗ್ಗೆ 7 :05 ರಿಂದ 7:35 ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ದಸರಾ ಉದ್ಘಾಟನೆ  ನಡೆಯಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv