ನರೇಂದ್ರ ಮೋದಿಯವರಿಗೆ ಹೆದರಿ ಎಲ್ಲಾ ಪಕ್ಷಗಳು ಒಂದಾಗಿವೆ: ಶ್ರುತಿ

ಹುಬ್ಬಳ್ಳಿ: ನಾನೊಬ್ಬ ಭಾರತೀಯಳು ಅನ್ನೋದಕ್ಕೆ ತುಂಬಾ ಹೆಮ್ಮೆಯಾಗುತ್ತೆ. ನನಗೆ ಭಾರತೀಯಳು ಅನ್ನುವ ಹೆಮ್ಮೆ ಎಷ್ಟಿದೆಯೋ, ಅಷ್ಟೇ ನಾನು ಒಬ್ಬ ಬಿಜೆಪಿ ಕಾರ್ಯಕರ್ತಳು ಅನ್ನುವ ಹೆಮ್ಮೆಯೂ ಇದೆ. ನಾನು ಉತ್ತರ ಕರ್ನಾಟಕಕ್ಕೆ ಬಂದಿದ್ದು ನನಗೆ ತವರು ಮನೆಗೆ ಬಂದಷ್ಟು ಖುಷಿ ಇದೆ ಎಂದು ಚಿತ್ರನಟಿ ಹಾಗೂ ಬಿಜೆಪಿ ನಾಯಕ ಶ್ರುತಿ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಹ್ಲಾದ ಜೋಶಿ ಪರ ಪ್ರಚಾರಾರ್ಥ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಶ್ರುತಿ, ಮಹಿಳೆಯರು ದೇಶದಲ್ಲಿ ಎಲ್ಲಾ ರಂಗದಲ್ಲಿ ಮುಂದೆ ಬರಬೇಕು. ಮೋದಿ ಕೇವಲ‌ ಬುಟಾಟಿಕೆಗೆ ಯೋಜನೆಗಳನ್ನ ತಂದಿಲ್ಲ. ಕಳೆದ ಬಾರಿ ಮೋದಿ ಮೇಲೆ ನಂಬಿಕೆಯಿಟ್ಟು ಜನ ವೋಟ್ ಮಾಡಿದ್ರು. ಈ ಬಾರಿ ಆ ನಂಬಿಕೆ ಉಳಿಸಿಕೊಂಡಿದ್ದಾರೆ ಅದಕ್ಕೆ ನೀವು ವೋಟ್ ಮಾಡಬೇಕು. ನರೇಂದ್ರ ಮೋದಿಯವರಿಗೆ ಹೆದರಿ ಎಲ್ಲಾ ಪಕ್ಷಗಳು ಒಂದಾಗಿವೆ. ಆ ಘಟಬಂಧನ್​ಗಂತೂ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಈ ಬಾರಿಯ ಚುನವಾಣೆ ಇಡೀ ದೇಶದ ಅಭಿವೃದ್ಧಿ ಗಾಗಿ ನಡೆಯುತ್ತಿರೋ ಚುನಾವಣೆ. ಮೋದಿಯವರನ್ನ ಚೋರ್ ಅಂತ ಕರೆದವರೇ ಇಂದು ಬೇಲ್‌ ಮೇಲೆ‌ ಹೊರಗಡೆ ಇದ್ದಾರೆ. ಎಲ್ಲಾ ಮಹಿಳೆಯರು ಕೂಡಾ ಚೌಕಿದಾರ್ ಆಗಬೇಕು. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವತ್ತ ಹೆಜ್ಜೆ ಹಾಕಬೇಕೆಂದು ಬಿಜೆಪಿ ಮಹಿಳಾ ಸಮಾವೇಶದಲ್ಲಿ ಚಿತ್ರನಟಿ ಶೃತಿ ಹೀಗೆ ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv