ಶ್ರುತಿ ಹರಿಹರನ್​ಗೆ ಮದುವೆ ವಾರ್ಷಿಕೋತ್ಸವ..! ಎಷ್ಟನೇ ವರ್ಷದ್ದು ಗೊತ್ತಾ..?

ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಇತ್ತೀಚೆಗೆ #MeToo ಅಭಿಯಾನದಿಂದ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಆನಂತರದಲ್ಲಿ ಶ್ರುತಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ‘ನಾತಿಚರಾಮಿ’ ಚಿತ್ರ ಬಿಡುಗಡೆಯಾದ್ದದ್ದು ಬಿಟ್ಟರೆ ಮತ್ಯಾವ ಸಿನಿಮಾವೂ ಬಂದಿಲ್ಲ. ಅಂದ್ಹಾಗೆ ಇವತ್ತು ಶ್ರುತಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಎಂಟು ವರ್ಷದ ಲವ್​ಸ್ಟೋರಿ..!

#MeToo ಆರೋಪ ಸುದ್ದಿಯಾಗೋವರೆಗೂ ಶ್ರುತಿ ಮದುವೆ ಆಗಿರೋದು ಯಾರೊಬ್ಬರಿಗೂ ತಿಳಿದಿರಲಿಲ್ಲ. ಅರ್ಜುನ್​ ಸರ್ಜಾ ಮೇಲೆ ದೂರು ಸಲ್ಲಿಸಿದಾಗಲೇ ಶ್ರುತಿ ಮದುವೆಯಾಗಿರೋ ವಿಚಾರ ಗೊತ್ತಾಗಿದ್ದು. ದೂರಿನಲ್ಲಿ ಶ್ರುತಿಹರಿಹರನ್​ W/O ರಾಮ್​ಕುಮಾರ್ ಅಂತಾ ನಮೂದಿಸಿದ್ದರು. ಅಲ್ಲಿಂದಾಚೆಗೆ ಮದುವೆ ಆಗಿರೋ ವಿಚಾರ ಹೊರಗೆ ಬಂದಿತ್ತು. ಅಂದ್ಹಾಗೆ ಶ್ರುತಿ- ರಾಮ್​ ಇಬ್ಬರದ್ದೂ ಏಳೆಂಟು ವರ್ಷದ ಫ್ರೆಂಡ್​ಶಿಪ್​. ಶ್ರುತಿಯ ಸಾಧನೆಯ ಹಿಂದೆ ರಾಮ್​ ನಿಂತಿದ್ದರು. ಇದೇ ಫ್ರೆಂಡ್​ಶಿಪ್​ ಮುಂದೆ ಪ್ರೀತಿಯಾಗಿಯೂ ಬದಲಾಗಿತ್ತು. ಮೂಲಗಳ ಪ್ರಕಾರ ಕಳೆದ ವರ್ಷವೇ ಇಬ್ಬರೂ ಮದುವೆಯಾಗಿದ್ದು, ಸುಖಿ ಸಂಸಾರ ನಡೆಸುತ್ತಿದ್ದಾರೆ. ಇಂದು ಅವರ ಮದುವೆ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್​ ಮಾಡಿದ್ದಾರೆ. ಉಳಿದಂತೆ ವಿವಾದದ ನಡುವೆಯೂ ಶ್ರುತಿ, ಚಿರು ಸರ್ಜಾ ಜೊತೆಗೆ ‘ಆದ್ಯ’ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv