‘ಜೆರ್ಸಿ’ಯಲ್ಲಿ ನಾನಿ ಭರ್ಜರಿ ರೊಮ್ಯಾನ್ಸ್..!

ಬಾಲಿವುಡ್​ ಸೇರಿದಂತೆ ಹಲವು ಭಾಷೆಗಳಲ್ಲಿ ಸ್ಟಾರ್​ಗಳ ಜೀವನಾಧರಿತ ಸಿನಿಮಾ ಬರೋದು ಕಾಮನ್. ಇದೀಗ ಕ್ರಿಕೆಟ್ ಲೋಕಕ್ಕೂ ಇದು ಕಾಲಿಟ್ಟಿದೆ. ಕ್ರಿಕೆಟ್ ದಂತಕಥೆ ಸಚಿನ್​ರ ‘ಎ ಬಿಲಿಯನ್ ಡ್ರೀಮ್ಸ್’ ಚಿತ್ರ ಬಂದ ಬಳಿಕ ಕೂಲ್ ಕ್ಯಾಫ್ಟನ್ ಧೋನಿ ಸಾಹಸಗಾಥೆಯೂ ಸಿನಿಮಾ ರೂಪದಲ್ಲಿ ಬಂದು ಭಾರೀ ಜನಮೆಚ್ಚುಗೆ ಗಳಿಸಿತ್ತು. ಇದೀಗ ಭಾರತೀಯ ಶ್ರೇಷ್ಟ ಆಟಗಾರ ರಮಣ್ ಲಂಬಾ ಜೀವನ ಕಥೆ ಆಧರಿಸಿ ತೆಲುಗಿನಲ್ಲಿ ‘ಜೆರ್ಸಿ’ ಅನ್ನೋ ಹೊಸ ಸಿನಿಮಾ ಬರ್ತಿದೆ.

‘ನ್ಯಾಚುರಲ್ ಸ್ಟಾರ್’ ನಾನಿ ಮತ್ತು ಕನ್ನಡದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಜೊತೆಯಾಗಿ ನಟಿಸಿರೋ ಈ ಚಿತ್ರ ಪೊಸ್ಟರ್​ ಹಾಗೂ ಟೀಸರ್​ನಿಂದಲೇ ಧಮಾಕ ಸೃಷ್ಟಿಸಿತ್ತು. ಇದೀಗ ಚಿತ್ರತಂಡ ಭರ್ಜರಿಯಾಗಿರೋ ಟ್ರೈಲರ್ ರಿಲೀಸ್​ ಮಾಡಿದೆ.

ನಾನಿ ಜೊತೆ ಶ್ರದ್ಧಾ ಡ್ಯೂಯೆಟ್..!
ಚಿತ್ರದಲ್ಲಿ ನಾನಿ ಅರ್ಜುನ್​ ಅನ್ನೋ ರೋಲ್​ನಲ್ಲಿ ಕಾಣಿಸಿಕೊಂಡಿದ್ದು ಪಕ್ಕಾ ಕ್ರಿಕೆಟ್​ ಪ್ಲೇಯರ್​​ನಂತೆ ದರ್ಶನ ಕೊಟ್ಟಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ದೊಡ್ಡ ಕ್ರಿಕೆಟಿಗನಾಗಲು ಏನೆಲ್ಲಾ ಕನಸು ಹೊಂದಿರ್ತಾನೆ, ಅದೆಲ್ಲವನ್ನು ನನಸಾಗಿಸಲು ಯಾವೆಲ್ಲ ಶತಪ್ರಯತ್ನ ಮಾಡುತ್ತಾನೆ ಅನ್ನೋ ಕಥೆಯ ತಿರುಳನ್ನು ಹೊಂದಿದೆ. ಕ್ರಿಕೆಟ್​ ಅನ್ನೇ ಉಸಿರಾಗಿಸಿಕೊಂಡು ಗುರಿ ಸಾಧನೆಗೆ ಪ್ರೀತಿ, ಪ್ರೇಮ ಎಲ್ಲವನ್ನೂ ತೊರೆದು ನಂತರ ಪ್ರಪಂಚವೇ ನಿಬ್ಬೆರಗಾಗಿ ನೋಡುವಂತೆ ದೊಡ್ಡ ಕ್ರಿಕೆಟಿಗನಾಗಿ ಹೇಗೆ ಸಾಧನೆ ಮಾಡುತ್ತಾನೆ ಅನ್ನೋ ಸಂದೇಶವನ್ನ ಚಿತ್ರ ಹೊಂದಿದೆ. ಚಿತ್ರದಲ್ಲಿ ನಾನಿ, ಮುಗುತಿ ಸುಂದರಿ ಶ್ರದ್ಧಾ ಜೊತೆಯಾಗಿ ಭರ್ಜರಿ ರೊಮ್ಯಾನ್ಸ್ ಕೂಡ ಮಾಡಿದ್ದಾರೆ.

ಇನ್ನು ಚಿತ್ರ ಲವ್, ರೊಮ್ಯಾನ್ಸ್, ಸೆಂಟಿಮೆಂಟ್, ಆ್ಯಕ್ಷನ್ ಸೇರಿದಂತೆ ಎಲ್ಲ ಜಾನರ್​​ಗಳನ್ನು ಒಳಗೊಂಡಿದೆ. ಚಿತ್ರಕ್ಕೆ ಗೌತಮ್ ತಿನ್ನಮರಿ ನಿರ್ದೇಶದವಿದ್ದು ಇದೇ ಏಪ್ರಿಲ್ 19 ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv