ಸಾಯಿಕುಮಾರ್ ಪುತ್ರ ಆದಿ, ಶ್ರದ್ಧಾ ಶ್ರೀನಾಥ್ ‘ಜೋಡಿ ‘ನೋಡಿ!

ಸ್ಯಾಂಡಲ್‌ವುಡ್‌ನ ಡೈಲಾಗ್‌ ಕಿಂಗ್, ಬಹುಭಾಷಾ ನಟ ಸಾಯಿಕುಮಾರ್ ಪುತ್ರ ಆದಿ ಸಾಯಿಕುಮಾರ್ ಹಾಗೂ  ಯುಟರ್ನ್ ಬೆಡಗಿ ಶ್ರದ್ದಾ ಶ್ರೀನಾಥ್ ಟಾಲಿವುಡ್‌ನಲ್ಲಿ  ಜೋಡಿಯಾಗಿ  ಮಿಂಚು ಹರಿಸ್ತಿದ್ದಾರೆ. ಸಾಯಿಕುಮಾರ್ ಮಗ ಆದಿ ಸಾಯಿಕುಮಾರ್ ಹಾಗೂ ಶ್ರದ್ಧಾ ಶ್ರೀನಾಥ್ ತೆಲುಗಿನ ಜೋಡಿ ಅನ್ನೋ ಸಿನಿಮಾದಲ್ಲಿ ಹೀರೋ ಹೀರೋಯಿನ್ ಆಗಿ ನಟಿಸ್ತಿದ್ದು, ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್‌ಲುಕ್ ಸಖತ್ ಕಲರ್‌ಫುಲ್ ಆಗಿದ್ದು ರೊಮ್ಯಾಂಟಿಕ್ ಜೋಡಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.  ಹೊಸಬರಾದ ವಿಶ್ವನಾಥ್ ಚಿತ್ರ ನಿರ್ದೇಶಿಸುತ್ತಿದ್ದು ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿದೆ. ಫಣಿ ಕಲ್ಯಾಣ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಯಾವಾಗ ಶುರುವಾಗಲಿದೆ ಮತ್ತು ಚಿತ್ರತಂಡದಲ್ಲಿ ಯಾರೆಲ್ಲ ಇದ್ದಾರೆ ಎಂಬುದರ ಕುರಿತು ಮುಂದಿನ ದಿನಗಳಲ್ಲೇ ರಿವೀಲ್ ಆಗಬೇಕಿದೆ.

ಬಹುಭಾಷೆಗಳಲ್ಲಿ ಬ್ಯುಸಿಯಾದ ಶ್ರದ್ಧಾ!

ಇತ್ತೀಚೆಗಷ್ಟೇ ಶ್ರದ್ಧಾ ಅಭಿನಯದ ಚೊಚ್ಚಲ ಹಿಂದಿ ಚಿತ್ರ ‘ಮಿಲನ್ ಟಾಕೀಸ್’ ತೆರೆಕಂಡಿತ್ತು. ಕನ್ನಡದಲ್ಲಿ ‘ರುಸ್ತುಂ’ ಸೇರಿ ಅವರ ಸಾಕಷ್ಟು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.ಇನ್ನೊಂದೆಡೆ ಟಾಲಿವುಡ್‌ನಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯದ ಮೊದಲ ತೆಲುಗು ಸಿನಿಮಾ ‘ಜೆರ್ಸಿ’ ರಿಲೀಸ್‌ಗೆ ರೆಡಿಯಾಗಿದೆ. ಈಗ ಇದರ ಬೆನ್ನಲ್ಲೆ ಜೋಡಿ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಶ್ರದ್ಧಾ ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗುತ್ತಿದ್ದಾರೆ.

ಇನ್ನು ಈ ಹಿಂದೆಯೇ ತಮ್ಮ ಪುತ್ರನನ್ನ ಕನ್ನಡಕ್ಕೆ ಪರಿಚಯಿಸಬೇಕು ಅನ್ನೋ ಆಸೆ ಸಾಯಿಕುಮಾರ್‌ ಅವರಿಗಿತ್ತು. ತೆಲುಗಿನ ಸೂಪರ್ ಹಿಟ್ ‘ಕಾರ್ತಿಕೇಯ’ ಚಿತ್ರವನ್ನ ಕನ್ನಡಕ್ಕೆ ರಿಮೇಕ್ ಮಾಡಿ ಈ ಚಿತ್ರದ ಮೂಲಕ ಆದಿಯನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸ್ತಾರೆ ಎನ್ನಲಾಗಿತ್ತು. ಆದ್ರೆ ಅದು ಕೈಗೂಡಲಿಲ್ಲ. ಈಗ ಕನ್ನಡತಿ ಟಾಲಿವುಡ್‌ನಲ್ಲಿ ಆದಿಗೆ ಜೊತೆಯಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv