ಲಾರಿಗೆ ವಿದ್ಯುತ್​ ತಂತಿ ತಗುಲಿ ಕ್ಲೀನರ್ ಸಾವು

ರಾಯಚೂರು: ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಕ್ಲೀನರ್ ಸಾವನ್ನಪ್ಪಿದ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ. ಬೀದರ ಜಿಲ್ಲೆ ಹಳ್ಳಿಖೇಡ ಗ್ರಾಮದ ಮುಜೇಶ(33) ಮೃತ ದುರ್ದೈವಿ. ಶಿಲ್ಪಾ ಮೆಡಿಕೇರ್ ಕಂಪನಿ ಬಳಿ ಟಯರ್ ತುಂಬಿದ್ದ ಲಾರಿಯನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.