ಬೇಕರಿಯಲ್ಲಿ ಶಾರ್ಟ್​ ಸರ್ಕ್ಯೂಟ್​: ಅಪಾರ ಪ್ರಮಾಣದ ಬೇಕರಿ ಪದಾರ್ಥಗಳು ಭಸ್ಮ

ಕೊಡಗು: ಮಡಿಕೇರಿಯ ಜನರಲ್​ ತಿಮ್ಮಯ್ಯ ಸರ್ಕಲ್​ ಬಳಿ ಇರುವ ಶೆಟ್ಟಿ ಬೇಕರಿಯಲ್ಲಿಂದು ಶಾರ್ಟ್ ಸರ್ಕ್ಯೂಟ್​ ಸಂಭವಿಸಿದೆ.
ಬೇಕರಿಯ ಫ್ರೀಡ್ಜ್​ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದಾಗಿ​ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿದೆ ಎನ್ನಲಾಗಿದೆ. ಬೆಂಕಿಯ ಜ್ವಾಲೆಯಲ್ಲಿ ಬೇಕರಿಯಲ್ಲಿದ್ದ ಬೇಕರಿ ಪದಾರ್ಥಗಳು, ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಇನ್ನು ಬೇಕರಿ ಪಕ್ಕದಲ್ಲೇ ಪೆಟ್ರೋಲ್​ ಬಂಕ್​ ಇತ್ತು. ಕೂಡಲೇ ಅಗ್ನಿ ಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv