ಶಾರ್ಟ್ ಸರ್ಕ್ಯೂಟ್​​ನಿಂದ 6 ಎಕರೆ ಅಡಿಕೆ ತೋಟ ಬೆಂಕಿಗಾಹುತಿ

ದಾವಣಗೆರೆ: ಶಾರ್ಟ್ ಸರ್ಕ್ಯೂಟ್ ನಿಂದ ಫಲಕ್ಕೆ ಬಂದಿದ್ದ ಆರು ಎಕರೆ ಅಡಿಕೆ ತೋಟ ಬೆಂಕಿಗಾಹುತಿಯಾದ ಘಟನೆ ದಾವಣಗೆರೆ ತಾಲ್ಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಎಂಬುವವರಿಗೆ ಸೇರಿದ 6ಎಕರೆ ತೋಟ ಎನ್ನಲಾಗಿದ್ದು, ಟಿಸಿಯಿಂದ ಬೋರ್ ವೇಲ್ ಗೆ ಸಂಪರ್ಕದ ಲೈನ್ ನಲ್ಲಿ ವಿದ್ಯುತ್ ಸ್ಪರ್ಶ ಕಾಣಿಸಿಕೊಂಡು ತೋಟದಲ್ಲಿದ್ದ ಒಣ ಹುಲ್ಲಿಗೆ ಬೆಂಕಿ‌ಹೊತ್ತಿಕೊಂಡಿದೆ. ಬಳಿಕ ಇಡೀ ತೋಟಕ್ಕೆ ಬೆಂಕಿ ಹರಿದಿದ್ದು ಅಡಿಕೆ ತೋಟ, ಬಾಳೆಗಿಡಗಳು, ತ್ಯಾಗದ ಗಿಡ, ಸಿಲ್ವರ ಗಿಡ ಕೆಲ ಭಾಗಗಳು ಸುಟ್ಟಿವೆ.
ಜೊತೆಗೆ ಅಡಿಕೆಗೆ ನೀರುಣಿಸಲು ಇದ್ದ ಬೋರ್ ವೆಲ್ ಮೋಟರ್, ಡ್ರಿಪ್ ಬೆಂಕಿಗಾಹುತಿಯಾಗಿದೆ. ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ. ಸದ್ಯ ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv