ಸದ್ದಿಲ್ಲದೇ ನಡೀತಿದೆ ‘ಗಂಡುಗಲಿ ಮದಕರಿ ನಾಯಕ’ನ ಶೂಟಿಂಗ್ ಪ್ಲಾನ್..!

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬತ್ತಳಿಕೆಯಲ್ಲಿ ಒಡೆಯ, ರಾಬರ್ಟ್ ಸೇರಿದಂತೆ ಸಾಲು ಸಾಲು ಬಿಗ್ ಹಿಟ್ ಸಿನಿಮಾಗಳಿವೆ. ಅದರ ನಡುವೆಯೇ ಕನ್ನಡದ ಐತಿಹಾಸಿಕ ಕಥೆಯಾಧಾರಿತ ಸಿನಿಮಾ ’ಗಂಡುಗಲಿ ಮದಕರಿ ನಾಯಕ’ ಚಿತ್ರದ ಶೂಟಿಂಗ್​ಗೂ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ. ಈಗಾಗಲೇ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಇಡೀ ಚಿತ್ರತಂಡ ಕೋಟೆನಾಡಿನಲ್ಲಿ ಲೋಕೆಷನ್ ಹಂಟ್ ಶುರುಮಾಡಿದೆ.

ಬಿ.ಎಲ್. ವೇಣು ಕಾದಂಬರಿಯಾಧರಿತ ಚಿತ್ರ ಇದಾಗಿದ್ದು ಕಥೆಗೆ ತಕ್ಕಂತೆ ಚಿತ್ರದುರ್ಗದ ಹಳ್ಳಿಯೊಂದರಲ್ಲಿ ಅದ್ಧೂರಿ ಸೆಟ್ ಹಾಕಲು ಚಿಂತನೆ ನಡೆದಿದೆ. ಈಗಾಗಲೇ ದರ್ಶನ್​ಗೆ ಮೇಕಪ್ ಟೆಸ್ಟ್​ ಕೂಡ ನಡೆದಿದ್ದು ಮದಕರಿ ನಾಯಕನ ಪಾತ್ರದಲ್ಲಿ ಮಿಂಚಲು ದಚ್ಚು ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಅದಕ್ಕಾಗಿ ಉದ್ದದ ಗಡ್ಡ, ಕೂದಲು ಬಿಟ್ಟು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಮದಕರಿ ನಾಯಕ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸ ನಡೀತಾಯಿದೆ. ಅಲ್ಲದೇ ದರ್ಶನ ಕೂಡ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು ಚಿತ್ರದ ಬಳಿಕ ಈ ಟೀಮ್ ಸೇರಲಿದ್ದಾರೆ.

ಸಂಗೊಳ್ಳಿ ರಾಯಣ್ಣದಂತ ಅದ್ಧೂರಿ ಸಿನಿಮಾದ ಬಳಿಕ ದರ್ಶನ್ ನಟಿಸ್ತಾಯಿರೋ ಮತ್ತೊಂದು ಐತಿಹಾಸಿಕ ಸಿನಿಮಾ ಇದಾಗಿದೆ. ಚಿತ್ರಕ್ಕಾಗಿ ಕಲಾವಿದರು ಹಾಗೂ ತಂತ್ರಜ್ಞರ ಹುಡುಕಾಟ ಕೂಡ ಶುರುವಾಗಿದೆ. ಚಿತ್ರಕ್ಕೆ ಹಂಸಲೇಖ ಸಂಗೀತವಿದ್ದು ಮತ್ತೊಮ್ಮೆ ಕೋಟೆನಾಡಿನ ವೈಭವ ವಿಶ್ವಮಟ್ಟದಲ್ಲಿ ಸದ್ದು ಮಾಡಲಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv