ಶೂ ವಿತರಣೆ ವಿವಾದ: ಗುಂಡ್ಲುಪೇಟೆ ಬಿಇಓ  ವಿರುದ್ಧ ಆರೋಪ

ಚಾಮರಾಜನಗರ: ಶಾಲಾ ಮಕ್ಕಳಿಗೆ ಶೂ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಬಿಇಓ ವಿರುದ್ಧ ಫುಟ್‌ವೇರ್‌ ಶಾಪ್‌ನ ಮಾಲೀಕನೊಬ್ಬ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ಬಿಇಓ ಸೋಮಶೇಖರ್ ವಿರುದ್ಧ ಹುಸಿ ಆದೇಶ ಹೊರಡಿಸಿದ್ದಾಗಿ ಆರೋಪಿಸಿ ಹೆಚ್‌ಡಿಕೋಟೆಯ ಆರ್ಯನ್ ಶೂ ಮಾಲೀಕ ನೌಷಾದ್ ಅನ್ನೋರು ಪ್ರಕರಣ ದಾಖಲಿಸಿದ್ದು, ಇದಕ್ಕೆ ಪ್ರತಿಯಾಗಿ ಬಿಇಓ ಕೂಡಾ ನೌಷಾದ್ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.ತಮ್ಮಿಂದ ಶೂ ಖರೀದಿ ಮಾಡದ ಬಿಇಓ, ಈ ಕುರಿತಂತೆ ಹುಸಿ ಸರ್ಕಾರಿ ಆದೇಶ ಸೃಷ್ಟಿಸಿದ್ದಾರೆಂದು ದೂರಿನಲ್ಲಿ ನೌಷಾದ್‌ ಆರೋಪಿಸಿದ್ದು ಈ ಕುರಿತಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದೆ.

Leave a Reply

Your email address will not be published. Required fields are marked *