ಮಹೇಶ್​​ ಹೇಳಿದ್ದು ಕಾಂಗ್ರೆಸ್ ಗಿಡ ಕಿತ್ತು ಹಾಕಬೇಕು ಅಂತ, ಪಕ್ಷವನ್ನಲ್ಲ..!

ಮೈಸೂರು: ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎನ್​. ಮಹೇಶ್​ ನಿನ್ನೆ ತಮ್ಮ ಸ್ಥಾನಕ್ಕೆ​ ದಿಢೀರ್​ ರಾಜೀನಾಮೆ ನೀಡಿದರು. ಈ ಮೂಲಕ ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್​ ಪತನವಾದಂತಾಗಿದೆ. ಇದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ನಡುವೆ ವಿಪಕ್ಷ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, ಸರ್ಕಾರ ರಚಿಸುವ ಇಂಗಿತವನ್ನು ಸಹ ವ್ಯಕ್ತಪಡಿಸಿದೆ. ಮಹೇಶ್​ ರಾಜೀನಾಮೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಎನ್​​​. ಮಹೇಶ್​ ರಾಜೀನಾಮೆ ಕುರಿತು ಕೃಷಿ ಸಚಿವ ಶಿವಶಂಕರ್​ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ರೈತ ದಸರಾ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎನ್​. ಮಹೇಶ್​ ಅವರು ದೇಶದಲ್ಲಿ ಕಾಂಗ್ರೆಸ್ ಗಿಡ ಕಿತ್ತು ಹಾಕಬೇಕು ಎಂದಿದ್ದಾರೆ. ಹೊರತು ಕಾಂಗ್ರೆಸ್​ ಪಕ್ಷವನ್ನಲ್ಲ ಎಂದು ಹೇಳಿದ್ದಾರೆ. ಎನ್​​​. ಮಹೇಶ್​​ ಅವರ ರಾಜೀನಾಮೆಗೂ ಕಾಂಗ್ರೆಸ್​ ಪಕ್ಷಕ್ಕೂ ಸಂಬಂಧ ಇಲ್ಲ. ಅವರ ಪಕ್ಷದ ಆಂತರಿಕ ವಿಚಾರದಿಂದಾಗಿ ರಾಜೀನಾಮೆ ಕೊಟ್ಟಿದ್ದಾರೆ ಎಂದರು. ಅಲ್ಲದೇ ಅವರ ರಾಜೀನಾಮೆಯ ವಿಚಾರದಲ್ಲಿ ಕಾಂಗ್ರೆಸ್ ಒತ್ತಡ ಹೇರಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್​​​ಗೆ ಸಪೋರ್ಟ್ ಮಾಡುತ್ತೇನೆ ಎಂದರೆ ಕಾಂಗ್ರೆಸ್​​ಗೂ ಸಂಪೋರ್ಟ್ ಮಾಡ್ತಾ ಇದಾರೆ ಅಂತ ಅರ್ಥ ಎಂದರು.