‘ತಮಿಳುನಾಡಿನ ಜಯಲಲಿತಾರನ್ನ ಮೀರಿಸುವಂಥ ಮಾಯಾಂಗನಿಯಂತೆ ಆಡ್ತಿದ್ದಾರೆ ಆಕೆ’

ಮಂಡ್ಯ: ನಾಗಮಂಗಲದಲ್ಲಿ ಇಂದು ಕಾಂಗ್ರೆಸ್-ಜೆಡಿಎಸ್ ಬಲಪ್ರದರ್ಶನ ನಡೆಯುತ್ತಿದ್ದು, ಜಂಟಿ ಪ್ರಚಾರ ಸಭೆಗೆ, ಚೆಲುವರಾಯಸ್ವಾಮಿ ಸೇರಿದಂತೆ ಬಹುತೇಕ ಕಾಂಗ್ರೆಸ್ಸಿಗರು ಗೈರಾಗಿದ್ದಾರೆ.  ಈ ಸಭೆಯಲ್ಲಿ ಸಂಸದ ಎಲ್.ಆರ್.ಶಿವರಾಮೇಗೌಡ  ಮಾತನಾಡಿ ಟೂರಿಂಗ್ ಟಾಕೀಸ್‌ಗೆ ಯಾರೂ ಮಾರುಹೋಗಬೇಡಿ. ನಟರು ಬಂದ್ರೆ ಜನವೋ ಜನ, ನೋಡಲು ಹೋದವರೆಲ್ಲಾ ವೋಟ್ ಹಾಕಲ್ಲ. ನಟರ ಹಿಂದೆ ಹೋಗಿರುವವರು ಚುನಾವಣೆ ಬಳಿಕ ಯಾವ ಪಕ್ಷಕ್ಕೆ ಹೋಗಬೇಕು ಅನ್ನೋ ಸ್ಥಿತಿ ಬರುತ್ತೆ. ಟೂರಿಂಗ್ ಟಾಕೀಸ್‌ ಆಟ ನಡೆಯಲ್ಲ. ಪಕ್ಷೇತರ ಅಭ್ಯರ್ಥಿ ಎಂಥಾ ಮಾತು ಆಡ್ತಿದ್ದಾರೆ. ತಮಿಳುನಾಡು ಜಯಲಲಿತಾರನ್ನ ಮೀರಿಸುವಂತಾ ಮಾಯಾಂಗನಿಯಂತೆ ಆಡ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಹೆಸರು ಹೇಳದೇ ಪರೋಕ್ಷವಾಗಿ ಅವರ ವಿರುದ್ಧ  ಕಿಡಿಕಾರಿದ್ರು.

ಇದೇ ವೇಳೆ ಮಂಡ್ಯ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮಾಧ್ಯಮಗಳಿಂದ ಪೆಡಂಭೂತವಾಗಿ ಬಿಂಬಿಸಲಾಗುತ್ತಿದೆ. ಸಿದ್ದರಾಮಯ್ಯ, ದೇವೇಗೌಡರ ಗರಡಿಯಲ್ಲಿ‌ ಪಳಗಿದವರು. ಹೀಗಾಗಿಯೇ ಇಡೀ ರಾಜ್ಯದಲ್ಲಿ ಮುಖ್ಯಮಂತ್ರಿ ಸೈ ಎನಿಸಿಕೊಂಡವರು, ದೇವೇಗೌಡ್ರು, ಸಿದ್ದರಾಮಯ್ಯ ಇಲ್ಲದಿದ್ರೆ ಕಾವೇರಿ ನೀರು ಸಿಗುತ್ತಿರಲಿಲ್ಲ. ದೇವೇಗೌಡರನ್ನು ನಂಬಿರುವ ನಾವ್ಯಾರು ಕೆಡುವುದಿಲ್ಲ. ನನ್ನನ್ನ ಎಂಪಿ‌ ಮಾಡ್ತೀನಿ ಅಂತ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಬೆಂಗಳೂರು ದಕ್ಷಿಣ ಎಂಎಲ್‌ ಟಿಕೆಟ್ ಕೊಟ್ಟರೂ ನಾನು ಬೇಡ ಅಂದೆ. ಕೊನೆಗೆ ಏನಾದರೂ ಅಧಿಕಾರ ಕೊಡಬೇಕು ಅಂತ ಎಂಪಿ‌ ಮಾಡಿದ್ರು. ನನ್ನ ಮರ್ಯಾದೆ ಪ್ರಶ್ನೆ, ನನ್ನ ನಂಬಿ ಬಂದಿರುವವರು ನಿಖಿಲ್ ಗೆಲ್ಲಿಸಬೇಕು ನಾನು 67 ಸಾವಿರ ಮತ ಪಡೆದಿದ್ದೆ, ಅದಕ್ಕಿಂತ ಹೆಚ್ಚಿನ ಮತ ಹಾಕಿಸ್ತೀವಿ ಎಂದು ಹೇಳಿದ್ರು.

ಇದೇ ವೇಳೆ ನಾಗಮಂಗಲಶಾಸಕ ಸುರೇಶ್ ಗೌಡ  ಮಾತನಾಡಿ.. ಮನೆಗೆ ಹೋದಾಗ ಮಾತನಾಡದವ್ರು, ಈಗ ಚುನಾವಣೆಗೆ ಬಂದಿದ್ದಾರೆ. ಸಿನಿಮಾ ನಟರು ನಟರಷ್ಟೇ. ಅವರು ತೆಗೆದ ಸಿನಿಮಾವನ್ನು ಉಚಿತವಾಗಿ ತೋರಿಸಲ್ಲ. ಆರು ತಿಂಗಳಾದ ಬಳಿಕ ಅವರು ನಿಮ್ಮತ್ರ ತಿರುಗಿಯೂ ನೋಡಲ್ಲ…..ಆದ್ದರಿಂದ ಅಭಿಮಾನಕ್ಕಾಗಿ ಮತ ಹಾಕುವುದು ಬೇಡ…ಬದಲಿಗೆ ಅಭಿವೃದ್ಧಿಗಾಗಿ ನಿಖಿಲ್ ಬೆಂಬಲಿಸಿ ಎಂದು ಮನವಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv