ಟ್ರೆಂಡಿಂಗ್​ನಲ್ಲಿ ಶಿವಣ್ಣನ ‘ಪೊಲೀಸ್ ಬೇಬಿ’ ಸಾಂಗ್..!

ಸೆಂಚುರಿ ಸ್ಟಾರ್ ಶಿವಣ್ಣ, ಡ್ಯಾನ್ಸಿಂಗ್​ನಲ್ಲಿ ಕಿಂಗ್ ಅನ್ನೋದು ನಮಗೆಲ್ಲಾ ಗೊತ್ತಿದೆ. ವಯಸ್ಸು 50 ದಾಟಿದ್ರೂ ಯುವಕರೂ ನಾಚುವಂತೆ ಸ್ಟೆಪ್ ಹಾಕಿ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡ್ತಾರೆ. ಸದ್ಯ ರವಿವರ್ಮ ನಿರ್ದೇಶನದಲ್ಲಿ ಬರ್ತಿರೋ ‘ರುಸ್ತುಂ’ ಚಿತ್ರದ ‘ಯೂ ಆರ್​ ಮೈ ಪೊಲೀಸ್ ಬೇಬಿ’ ಅನ್ನೋ ಮೊದಲ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡಿನಲ್ಲಿ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಜೊತೆಯಾಗಿ ಶಿವಣ್ಣ ತಕಥೈ ಅಂತಾ ಕುಣಿದಿದ್ದಾರೆ.

ಕಣ್ಣಲ್ಲಿ ಕನ್ನಡಕ, ರಂಗು ರಂಗಿನ ಡ್ರೆಸ್, ಅದ್ಧೂರಿ ಸೆಟ್​ನಲ್ಲಿ ಶಿವಣ್ಣ ಹಾಗೂ ಶ್ರದ್ಧಾ ಮಿಂಚಿದ್ದಾರೆ. ಇನ್ನು ಈ ಹಾಡಿಗೆ ಎ.ಪಿ ಅರ್ಜುನ್ ಲಿರಿಕ್ಸ್ ಬರೆದಿದ್ದು ರಘು ದೀಕ್ಷಿತ್ ಹಾಗೂ ಅಪೂರ್ವ ಶ್ರೀಧರ್ ಕಂಠದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ. ಜೊತೆಗೆ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆಯಿದೆ. ಸದ್ಯ ಈ ಹಾಡು ಭಾರೀ ಜನಮೆಚ್ಚುಗೆ ಗಳಿಸಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸೋ ಮೂಲಕ ಟ್ರೆಂಡಿಂಗ್​ನಲ್ಲಿ ಟಾಪ್ 15ನೇ ಸ್ಥಾನದಲ್ಲಿದೆ.

ಚಿತ್ರದಲ್ಲಿ ಶಿವಣ್ಣ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ವಿವೇಕ್ ಒಬೇರಾಯ್, ಮಯೂರಿ, ಶಿವರಾಜ್ ಕೆ. ಆರ್ ಪೇಟೆ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಚಿತ್ರ ಇದೇ ಜೂನ್ 14 ರಂದು ತೆರೆಗೆ ಅಪ್ಪಳಿಸಲಿದೆ.

 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv