ಶಿವಣ್ಣನ ‘ಭಲೇ ಭಲೇ’ ಸಾಂಗ್​ ರಿಲೀಸ್..!

ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮತ್ತು ರವಿವರ್ಮ ಕಾಂಬಿನೇಷನ್​ನ ರುಸ್ತುಂ ಸಿನಿಮಾ ಟೀಸರ್ ಹಾಗೂ ಕೆಲ ಲಿರಿಕಲ್ ಹಾಡುಗಳಿಂದ ಸಿಕ್ಕಾಪಟ್ಟೇ ಸೌಂಡ್ ಮಾಡಿತ್ತು. ಇದೀಗ ಚಿತ್ರತಂಡ ‘ಭಲೇ ಭಲೇ’ ಅನ್ನೋ ಮತ್ತೊಂದು ಲಿರಿಕಲ್​​ ಸಾಂಗ್ ರಿಲೀಸ್ ಮಾಡಿದೆ. ಇದೊಂದು ಪಕ್ಕಾ ಮಾಸ್ ಟಪ್ಪಾಂಗುಚ್ಚಿ ಹಾಡಾಗಿದ್ದು, ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದಾರೆ. ಪೋಲೀಸ್​​ ಕಾಸ್ಟ್ಯುಮ್​​​ನಲ್ಲಿ ಗನ್​​ ಹಿಡಿದು ಮಿಂಚಿದ್ದಾರೆ. ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿದ್ದು ವ್ಯಾಸರಾಜ್ ಸೋಸ್ಲೆ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.
ರುಸ್ತುಂ ಸ್ಟಂಟ್ ಮಾಸ್ಟರ್ ರವಿವರ್ಮಾ ನಿರ್ದೇಶನದ ಚೊಚ್ಚಲ ಸಿನಿಮಾ. ಜಯಣ್ಣ ಮತ್ತು ಭೊಗೇಂದ್ರ, ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸದ್ಯ ರುಸ್ತುಂ ಆಲ್ಬಮ್​​ನ ಫಸ್ಟ್ ಹಾಡು ರಿಲೀಸ್ ಆಗಿದೆ. ಸಾಂಗ್ ರಿಲೀಸ್ ಮಾಡಿರೋ ಚಿತ್ರತಂಡ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರೋ ಲೆಕ್ಕಚಾಚಾರದಲ್ಲಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv