‘ಪವರ್ ಸ್ಟಾರ್’ ಸಾಹಸಕ್ಕೆ ಶಿವಣ್ಣನ ವಿಶ್​​..!

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಕ್ರೈಂ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬಹುತೇಕ ಸಿನಿಮಾಗಳು ಜನರನ್ನು ಮೆಚ್ಚಿಸುವಲ್ಲಿ ಸೋತಿದ್ದವು. ಆದ್ರೀಗ ಜನರಲ್ಲಿ ಕುತೂಹಲ ಕೆರಳಿಸೋ, ಮೆಚ್ಚುಗೆ ವ್ಯಕ್ತಪಡಿಸೋ ಕಂಟೆಂಟ್​ ಇಟ್ಟುಕೊಂಡು ‘ಕವಲುದಾರಿ’ ಬರ್ತಿದೆ. ಹಿರಿಯ ನಟ ಅನಂತ್​ನಾಗ್​ -‘ಆಪರೇಷನ್ ಆಲಮೇಲಮ್ಮ’ ಖ್ಯಾತಿಯ ರಿಷಿ ಮುಖ್ಯ ಪಾತ್ರದಲ್ಲಿ ನಟಿಸಿರೋ ಸಿನಿಮಾ ‘ಕವಲುದಾರಿ’. ಈ ಸಿನಿಮಾ ಆರಂಭದಿಂದಲೇ ದೊಡ್ಡ ಸೆನ್ಷೇಷನ್ ಸೃಷ್ಟಿಸಿತ್ತು. ಹಾಡು, ಟ್ರೈಲರ್​ಗಳೂ ಜನರ ಮೆಚ್ಚುಗೆ ಗಿಟ್ಟಿಸಿದ್ದವು. ಇಂಥದ್ದೊಂದು ದೊಡ್ಡ ಸಾಹಸಕ್ಕೆ ಸ್ಯಾಂಡಲ್​ವುಡ್ ನಟರೂ ಮುಕ್ತಕಂಠದಿಂದ ಹೊಗಳಿದ್ದರು. ಇದೀಗ ಪ್ರೀತಿಯ ತಮ್ಮನಾದ ಪುನೀತ್​ ಸಾಹಸಕ್ಕೆ ಶಿವಣ್ಣ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.
‘ಅಪ್ಪು ಫಸ್ಟ್​ ಪ್ರೊಡಕ್ಷನ್​ ಇದು’..!
‘ಪವರ್ ಸ್ಟಾರ್’ ಪುನೀತ್ ನಟನೆಯ ಜೊತೆಗೆ ಪ್ರೊಡಕ್ಷನ್​ನಲ್ಲೂ ಬ್ಯುಸಿಯಾಗಿದ್ದಾರೆ. ಪಿಆರ್​ಕೆ ಆಡಿಯೋ – ಪಿಆರ್​ಕೆ ಪ್ರೊಡಕ್ಷನ್​ನಿಂದ ಹೊಸ ಪ್ರತಿಭೆಗಳಿಗೆ ಬೆನ್ನು ತಟ್ಟಲು ಮುಂದಾಗಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್​ನ ಮೊದಲ ಬತ್ತಳಿಕೆಯಾದ ‘ಕವಲುದಾರಿ’ ನಾಳೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಅಪ್ಪು ನಿರ್ಮಾಣದ ಮೊದಲ ಪ್ರಯತ್ನವಾದ್ದರಿಂದ ಸಿನಿಮಾಗೆ ಶಿವಣ್ಣ ಶುಭಾಶಯ ಕೋರಿದ್ದಾರೆ. ‘ಕವಲುದಾರಿ ನಾಳೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಅಪ್ಪು ಕಟ್ಟಿರೋ ಪಿಆರ್​ಕೆ ಪ್ರೊಡಕ್ಷನ್​ ಮೊದಲ ಸಿನಿಮಾವಿದು. ಒಂದೊಳ್ಳೆ ಕಥೆ ಜೊತೆಗೆ ಒಂದೊಳ್ಳೆ ಚಿತ್ರತಂಡವಿದೆ. ಸಿನಿಮಾ ಎಲ್ಲರೂ ಮಿಸ್ ಮಾಡದೇ ನೋಡಿ’ ಅಂತಾ ಶಿವಣ್ಣ ವಿಶ್ ಮಾಡಿದ್ದಾರೆ. ಅಲ್ಲದೇ ‘ಕವಲುದಾರಿ’ ಇನ್​ವೆಸ್ಟಿಗೇಟಿವ್ ಸ್ಟೋರಿ ಆಗಿರೋದ್ರಿಂದ, ಇದೊಂದು ನೈಜಘಟನೆ ಆಧಾರಿತ ಸಿನಿಮಾನಾ ಎಂಬ ಕುತೂಹಲವೂ ಗಾಂಧಿನಗರದಲ್ಲಿದೆ.