ಅಪ್ಪಾಜಿಯ ಬಟ್ಟೆಯೂ ಬಿಳಿ​, ಜೀವನವೂ ಬಿಳಿ​..!

ಇಂದು ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ 13ನೇ ವರ್ಷದ ಪುಣ್ಯಸ್ಮರಣೆ. ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಅವರ ಹೊಸ ಸಿನಿಮಾ ಅಪ್ಪನ ಅಂಗಿ ಅನ್ನೋ ಸಿನಿಮಾ ಸೆಟ್ಟೇರಿದ್ದು ಈ ಬಗ್ಗೆ ಶಿವರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ರು.

ಅಪ್ಪನ ಅಂಗಿ ಸದಾ ಬಿಳಿ, ಅವರ ಮನಸ್ಸಿನಂತೆಯೇ..
ಅಪ್ಪನ ಅಂಗಿ ಅಂತಿದ್ಹಾಗೆ ಅವರಿಗೆ ಅಪ್ಪಾಜಿ ಧರಿಸುತ್ತಿದ್ದ ಅಂಗಿ ಬಗ್ಗೆ ನೆನೆಪಾಯ್ತು. ಎಲ್ರಿಗೂ ಗೊತ್ತಿರೋ ಹಾಗೆ ಡಾ. ರಾಜ್‌ಕುಮಾರ್ ಶುಭ್ರ ಬಿಳಿಬಣ್ಣದ ಶರ್ಟ್, ಪಂಚೆ ತೊಟ್ಟು ಮುಖದಲ್ಲಿ ಸದಾ ಮಂದಹಾಸ ಬೀರೋ ಮೇರು ನಟ. ಮಾತು, ಉಡುಗೆ ತೊಡುಗೆ ಎಲ್ಲದರಲ್ಲೂ ಸರಳತೆ ಮೆರೆದಿದ್ದ ಅವರು ಎಲ್ಲೇ ಹೋದ್ರೂ ಸದಾ ಬಿಳಿ ಪಂಚೆ ಹಾಗೂ ಅಂಗಿಯಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಶಿವಣ್ಣ ಮಾತಾಡ್ತಾ, ‘ಅವರ ಮನಸ್ಸು ಶುಭ್ರವಾದ ಬಿಳಿಬಣ್ಣದ ಹಾಗೆ. ಅವರ ಬಟ್ಟೆ ಬಣ್ಣ ಹೇಗೋ ಹಾಗೇ ಮನಸ್ಸೂ ಕೂಡ. ಅವರು ಕನ್ನಡ ಚಿತ್ರರಂಗವನ್ನು ಸಹ ಬಿಳಿ ಮಾಡಿಯೇ ಹೋದರು. ಹಠ ಮಾಡಿ ಒಂದೇ ಒಂದು ಸಾರಿ ಜೀನ್ಸ್ ಪ್ಯಾಂಟ್ ತೊಡಿಸಿ, ಅಪ್ಪಾಜಿಯನ್ನು ಏರ್​ಪೋರ್ಟ್​ಗೆ ಕರೆದುಕೊಂಡು ಹೋಗಿದ್ದೆ ಅಷ್ಟೆ’ ಅಂತಾ ಹಳೇ ದಿನಗಳನ್ನ ಮೆಲುಕು ಹಾಕಿದ್ರು.