ಸೈನಿಕರನ್ನು ಮುಂದಿಟ್ಟುಕೊಂಡು ಮೋದಿ ರಾಜಕೀಯ: ಶಿವರಾಜ್ ತಂಗಡಗಿ ಕಿಡಿ

ಕೊಪ್ಪಳ: ಸೈನಿಕರನ್ನು, ಧರ್ಮವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ಗುಡುಗಿದ್ದಾರೆ. ನಿನ್ನೆ ಸಮಾವೇಶದಲ್ಲಿ ಚೌಕಿದಾರ್ ಅಂತ ಎಲ್ಲರಿಂದ ಹೇಳಿಸಿದ್ರು. ಅದರಲ್ಲಿ ಯಾವುದೇ ಉಪ್ಪು ಖಾರ ಇರಲಿಲ್ಲ ಅಂತ ವ್ಯಂಗ್ಯವಾಡಿದ್ದಾರೆ. 15 ಲಕ್ಷ ಹಣ ಹಾಕ್ತೀನಿ ಅಂತ ಹೇಳಿದ್ರು. ₹2 ಕೋಟಿ ಉದ್ಯೋಗದ ಬಗ್ಗೆ ಹೇಳಿದ್ರು. ಯಾವುದಾದ್ರೂ ಮಾಡಿದ್ದಾರಾ ಅಂತ ತಂಗಡಗಿ ಪ್ರಶ್ನಿಸಿದ್ರು. ಅಲ್ಲದೇ 20 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಮೋದಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಮೋದಿ ಕನ್​​ಫ್ಯೂಸ್ ಆಗಿದ್ದಾರೆ. ಗಂಗಾವತಿ ಶಾಸಕರು ಹಾಗೂ ಕನಕಗಿರಿ ಶಾಸಕರು ಶೇ. 10 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ ಅನ್ನೋ ಬದಲು ರಾಜ್ಯ ಸರ್ಕಾರದ ಬಗ್ಗೆ ಹೇಳಿರಬೇಕು ಅಂತ ಕಿಡಿ ಕಾರಿದ್ರು.