ವಿಎಸ್ಐಎಲ್, ಎಂಪಿಎಂ ಕಾರ್ಖಾನೆ ದುಸ್ಥಿತಿಗೆ ಯಡಿಯೂರಪ್ಪ ಕಾರಣ -ಶಿವರಾಮೇಗೌಡ

ಶಿವಮೊಗ್ಗ: ಭದ್ರಾವತಿಯ ವಿಎಸ್ಐಎಲ್ ಮತ್ತು ಎಂಪಿಎಂ ಕಾರ್ಖಾನೆಯ ದುಸ್ಥಿತಿಗೆ ಯಡಿಯೂರಪ್ಪನವರೆ ಕಾರಣ. ಇದನ್ನು ನಂಬಿಕೊಂಡು ಮಂಡ್ಯದಿಂದ ಬಂದಿದ್ದ ಜನರ ಬದುಕು ಇಂದು ಬೀದಿಗೆ ಬಿದ್ದಿದೆ. ಯಡಿಯೂರಪ್ಪ , ಈಶ್ವರಪ್ಪ ಇಬ್ಬರೂ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ವಿಫಲವಾಗಿದ್ದಾರೆ ಅಂತಾ ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಶಿವರಾಮೇ ಗೌಡ ರೈತರ ಸಾಲ ಮನ್ನಾ ವಿಷಯದಲ್ಲಿ ಮೈತ್ರಿ ಸರ್ಕಾರ ಯಶಸ್ವಿಯಾಗಿದೆ. ರೈತರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಿದೆ. ನನ್ನ ಗುರುಗಳಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ರಾಷ್ಟ್ರೀಯ ನಾಯಕರು. ಅಂತಹವರನ್ನು ತೀರ್ಥಹಳ್ಳಿಗೆ ಕರೆತಂದು ಪ್ರಚಾರ ಮಾಡಿಸಿರುವುದು ಬೇಸರದ ಸಂಗತಿ.  ರಾಜ್ಯದ 28 ಲೋಕಸಭೆ ಕ್ಷೇತ್ರದ ಪೈಕಿ 20 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಅಂತಾ ಇದೆ ವೇಳೆ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv