ಅಪ್ಪನ ಸಾವಿನ ನೋವಿನಲ್ಲಿ ಅಳುತ್ತಲೇ SSLC ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ..!

ಹುಬ್ಬಳ್ಳಿ: ತಂದೆಯನ್ನ ಕಳೆದುಕೊಂಡ ನೋವಿನಲ್ಲಿಯೇ ಸಿ.ಎಸ್​.ಶಿವಳ್ಳಿ ಅವರ ದ್ವಿತಿಯ ಪುತ್ರಿ ಎಸ್​ಎಸ್​​ಎಲ್​ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ ಇಂದು ಇಂಗ್ಲಿಷ್ ಪರೀಕ್ಷೆಗೆ ಹಾಜರಾದರು. ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿರುವ ಕೆಎಲ್​​ಇ ಕಾಲೇಜ್​​ನಲ್ಲಿ 10ನೇ ತರಗತಿ ಓದುತ್ತಿದ್ದಾರೆ. ಅದರಂತೆ ಇಂದು ಸಿಬಿಎಸ್​ಇ ಇಂಗ್ಲಿಷ್ ಪರೀಕ್ಷೆಗೆ ಕಣ್ಣೀರು ಇಡುತ್ತಲೇ ಹಾಜರಾದರು. ಇನ್ನು ಪರೀಕ್ಷೆ ಮುಗಿದ ಬಳಿಕ ಶಿವಳ್ಳಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ನಿನ್ನೆ ಹೃದಯಾಘಾತದಿಂದ ಸಿ.ಎಸ್​.ಶಿವಳ್ಳಿ ವಿಧಿವಶರಾಗಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv