ನಾಮಪತ್ರ ಹಿಂಪಡೆದ ಶಿರೂರು ಶ್ರೀ

ಉಡುಪಿ: ಉಡುಪಿಯ ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಗಳು ಚುನಾವಣೆಯಲ್ಲಿ ಸ್ಫರ್ಧೆ ಮಾಡುವ ವಿಷಯ ರಾಜಕೀಯ ವಲಯದಲ್ಲಿ ಬಹಳ ಸುದ್ದಿ ಮಾಡಿತ್ತು. ಅಲ್ಲದೇ ಸ್ವಾಮಿಗಳು ಮೊದಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಾಗ ಕೊನೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ರು, ಆದ್ರೆ ಈಗ ನಾಮಪತ್ರ ವಾಪಾಸ್ಸು ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ, ತನ್ನನ್ನು ಭೇಟಿಯಾಗಿ ಕೋರಿದರೆ ಮಾತ್ರ ನಾಮಪತ್ರ ಹಿಂಪಡೆಯುವುದಾಗಿ ಹೇಳಿಕೊಂಡಿದ್ದ ಸ್ವಾಮೀಜಿ ಇದೀಗ ದಿಢೀರ್ ನಾಮಪತ್ರ ಹಿಂಪಡೆದಿದ್ದಾರೆ. ಮೂರು ದಿನಗಳಿಂದ ಕೇಂದ್ರ ಬಿಜೆಪಿ ಮುಖಂಡರು ನಾಮಪತ್ರ ಹಿಂಪಡೆಯುವಂತೆ ಮಾಡಿದ ವಿನಂತಿ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಶ್ರೀಗಳು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ  ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv