ಶಿರಾಡಿ ಮತ್ತು ಚಾರ್ಮಡಿ ಘಾಟ್​ನಲ್ಲಿ ಸಂಚಾರ ಬಂದ್!

ಚಿಕ್ಕಮಗಳೂರು: ಮಳೆಯಿಂದಾಗಿ ಪದೇ ಪದೇ ಭೂಕುಸಿತಕ್ಕೆ ಒಳಗಾಗಿದ್ದ ಶಿರಾಡಿ ಮತ್ತು ಚಾರ್ಮಡಿ ಘಾಟ್​ನಲ್ಲಿ ಸಂಚಾರ ಬಂದ್​ ಮಾಡಲಾಗಿದೆ. ಹೀಗಾಗಿ ಘಟ್ಟದ ಈ ಭಾಗದ ಮಂದಿ ಮಂಗಳೂರು ಸೇರಿದಂತೆ ಕರಾವಳಿ ಭಾಗಗಳನ್ನು ತಲಪಲು ಹರಸಾಹಸ ಪಡುವಂತಾಗಿದೆ.

ಪ್ರಯಾಣಿಕರು ಮಂಗಳೂರು ತಲುಪಬೇಕಾದ್ರೆ ಕೊಟ್ಟಿಗೆಹಾರದಿಂದ ಕಳಸ – ಕುದುರೆಮುಖ ಬಳಸಿ ಹೋಗಬೇಕು. ಇಲ್ಲದಿದ್ದರೆ ಮೈಸೂರು-ಮಡಿಕೇರಿ-ಪುತ್ತೂರು ಮಾರ್ಗವಾಗಿ ಹೋಗಬೇಕು. ಇತ್ತ ಮಂಗಳೂರಿನಿಂದ ಬರಬೇಕಾದರೂ ಇದೇ ಮಾರ್ಗವನ್ನೇ ಬಳಸಬೇಕಾಗಿದೆ. ಇಲ್ಲದಿದ್ದರೇ, ಶೃಂಗೇರಿ-ಕೊಪ್ಪ ಮಾರ್ಗವಾಗಿ ತೀರ್ಥಹಳ್ಳಿ ಮುಖಾಂತರ ಬಾಳೇಬರೆ ಅಥವಾ ಆಗುಂಬೆ ಘಾಟಿ ಮಾರ್ಗವಾಗಿ ಕರಾವಳಿ ಸಂಪರ್ಕ ಸಾಧಿಸಬೇಕಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv