ಸಹ್ಯಾದ್ರಿಯನ್ನ ಹೆಲಿಕಾಪ್ಟರ್​ನಲ್ಲಿ ಕುಳಿತು ಕಣ್ತುಂಬಿಕೊಳ್ಳಿ..

ಶಿವಮೊಗ್ಗ :  ಜ.23 ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ. ಕೆಸರು ಗದ್ದೆ ಓಟ, ಸೈಕಲ್ ಸ್ಪರ್ಧೆ, ಎತ್ತಿನಗಾಡಿ ಓಟ, ಲಾನ್ ಟೆನ್ನಿಸ್, ಈಜು, ಸ್ಕೇಟಿಂಗ್ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಬ್ಸಿಡಿ ದರದಲ್ಲಿ ಬಸ್​​ ಮೂಲಕ ಟೂರ್​​ ಪ್ಯಾಕೇಜ್​​ ಮಾಡಲಾಗಿದೆ. ಒಟ್ಟು 7 ಬಸ್​​ ರೂಟ್​​​​ ಗುರತಿಸಲಾಗಿದೆ. ಇದಕ್ಕಾಗಿ ₹100 ದರ ನಿಗದಿಪಡಿಸಲಾಗಿದ್ದು, ಸೈನ್ಸ್ ಮೈದಾನದಿಂದ ಪ್ರತಿದಿನ ಮುಂಜಾನೆ 7.30ಕ್ಕೆ ಬಸ್​​ ಹೊರಟು ಸಂಜೆ 5.30ಕ್ಕೆ ವಾಪಾಸಾಗಲಿದೆ ಎಂದು ಡಿಸಿ ತಿಳಿಸಿದ್ದಾರೆ. ಅಲ್ಲದೇ ಮಧ್ಯಾಹ್ನದ ಊಟದ ವೆಚ್ಚವನ್ನು ಸಹ ಭರಿಸಲಾಗುವುದು. ಸಾರ್ವಜನಿಕರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಲು ಇದು ಉತ್ತಮ ಅವಕಾಶವಾಗಿದೆ. ಚಾರಣಪ್ರಿಯರಿಗಾಗಿ ಚಾರಣ ಮಾರ್ಗವನ್ನು ಗುರುತಿಸಿ ಗೈಡೆಡ್ ಚಾರಣ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ನೋಂದಣಿಗೆ ಸಂಪರ್ಕಿಸಿ: ಕ್ರೀಡೆಗಳ ಕುರಿತಾದ ಮಾಹಿತಿ ಹಾಗೂ ನೋಂದಣಿಗಾಗಿ ಲೋಕೇಶ್ 9483778002, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಶಿವಲಿಂಗು 8762778402, 08182-255293, ಹೆಲಿಟೂರ್ ಬುಕ್ಕಿಂಗ್‍ಗಾಗಿ ಚಂದನ್ 9742038039ಗೆ ಸಂಪರ್ಕಿಸಬಹುದು.