ಸ್ವಾರ್ಥಕ್ಕಾಗಿ ಅಲ್ಲ, ಜಿಲ್ಲೆ ಅಭಿವೃದ್ಧಿಗಾಗಿ ಮಂತ್ರಿ ಸ್ಥಾನ ಕೇಳ್ತಿದ್ದೀನಿ: ಶಾಸಕ ಬಿ.ಕೆ.ಸಂಗಮೇಶ್

ಶಿವಮೊಗ‌್ಗ: ವೀರಶೈವ ಗಾಣಿಗ ಸಮುದಾಯದಲ್ಲಿ ನಾನೂಬ್ಬನೆ ಗೆದ್ದು ಬಂದಿದ್ದೆನೆ. ನಗರದ ಅಭಿವೃದ್ಧಿ, ಅಡಿಕೆ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಹಲವಾರು ಕೆಲಸ ಮಾಡಬೇಕಿದೆ. ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡುವ ಅವಕಾಶ ಕಡಿಮೆ, ಮಂತ್ರಿ ಸ್ಥಾನ ನೀಡಿದ್ರೆ ಹೆಚ್ಚಿನ ಕೆಲಸ ಮಾಡಬಹುದು.ನನ್ನ ಸ್ವಾರ್ಥಕ್ಕಾಗಿ ಮಂತ್ರಿ ಸ್ಥಾನ ಕೇಳ್ತಿಲ್ಲ. ಜಿಲ್ಲೆಯ ಅಭಿವೃದ್ದಿಗೆ ಮಂತ್ರಿ ಸ್ಥಾನ ಕೇಳಿದ್ದೇನೆ ಎಂದು ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆ, ಇಲ್ಲಿ ಗೆದ್ದು ಬಂದಿದ್ದೇನೆ. ಮಂತ್ರಿ ಸ್ಥಾನ ನೀಡದೆ ಹೋದ್ರೆ, ಮುಂದಿನ ದಿನಗಳಲ್ಲಿ ಮತದಾರರು ಹಾಗೂ ಹಿತೈಷಿಗಳು, ಜಿಲ್ಲಾ ಮುಖಂಡರುಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತಗೆದುಕೊಳ್ಳುತ್ತೇನೆ. ಇದಲ್ಲದೆ ಮುಂದಿನ ದಿನಗಳಲ್ಲಿ ಹೈಕಮಾಂಡ್ ನನ್ನನ್ನು ಗುರುತಿಸಬಹುದು ಎಂಬ ವಿಶ್ವಾಸವಿದೆ. ಮಂತ್ರಿಮಂಡಲದ ಉಳಿದ 7 ಸ್ಥಾನಗಳಲ್ಲಿ ಒಂದು ಸ್ಥಾನ ನನಗೆ ಸಿಗುವ ಭರವಸೆ ಇದೆ ಎಂದು ಶಾಸಕ ಬಿ.ಕೆ.ಸಂಗಮೇಶ್ ವಿಶ್ವಾಸ ವ್ಯಕ್ತಪಡಿಸಿದ್ರು.