ಶಿವಮೊಗ್ಗ: ಜೀರೋ ಟ್ರಾಫಿಕ್​ನಲ್ಲಿ ಮಹಿಳಾ ರೋಗಿ ಆಸ್ಪತ್ರೆಗೆ

ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆಯಿಂದ ಮಹಿಳಾ ರೋಗಿಯೊಬ್ಬರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಜೀರೊ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಿ ಶಿವಮೊಗ್ಗ ಎಸ್​ಪಿ ಅಭಿನವ್​ ಖರೆ ಮಾನವೀಯತೆ ಮೆರೆದಿದ್ದಾರೆ.

ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಸುಜಾತ ಎಂಬ ಮಹಿಳಾ ರೋಗಿಯನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಈ ಹಿನ್ನೆಲೆ ರೋಗಿಯ ಪತಿಯ ಕೋರಿಕೆ ಮೇರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಲ್ಪಿಸಿಕೊಟ್ಟಿದ್ದಾರೆ.

ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಿಂದ ಆಗುಂಬೆ ತನಕ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ರೋಗಿಯಿದ್ದ ಆಂಬ್ಯುಲೆನ್ಸ್ ಮುಂದೆ ಪೊಲೀಸ್​ ಇಲಾಖೆಯ ವಾಹನಗಳು ಸಂಚಾರ ಮುಕ್ತಗೊಳಿಸುತ್ತಾ ಸಾಗಿದ್ದವು. ಇನ್ನು ಆಗುಂಬೆಯಿಂದ ಮುಂದಿನ ಟ್ರಾಫಿಕ್​ ಹೊಣೆಯನ್ನು ಮಂಗಳೂರು ಪೊಲೀಸರು ಹೊತ್ತಿದ್ದು, ಸದ್ಯ ರೋಗಿಯನ್ನು ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv