ತನ್ನ​​ ಹೆಸರಲ್ಲಿ ಕೆಂಪೇಗೌಡರ ವಿರುದ್ಧ ಪೋಸ್ಟ್​: ಶಿಲ್ಪಾ ಗಣೇಶ್ ಗರಂ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಶಿಲ್ಪಾ ಗಣೇಶ್​​ರಿಂದ ಅವಮಾನವಾಗಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗರಂ ಆಗಿದ್ದಾರೆ.

”ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ, ಸಿಲ್ಕ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ” ಎಂದು ಶಿಲ್ಪಾ ಗಣೇಶ್ ಹೆಸ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಲಾಗಿತ್ತು. ಶಿಲ್ಪಾ ಅವರ ಫೋಟೋ ಸಮೇತ ಶಿಲ್ಪಾ ಗಣೇಶ್ ಹೆಸರಿನ‌ ಫೇಸ್​​ಬುಕ್ ಪೇಜ್​​​ನಲ್ಲಿ ಪೋಸ್ಟ್​​ ಅಪ್ಲೋಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಲ್ಪಾ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಗಣೇಶ್ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ.

ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ನನಗೆ ಕೆಂಪೇಗೌಡರ ಬಗ್ಗೆ ಅಪಾರ ಗೌರವವಿದೆ. ಈ ವಿಚಾರವಾಗಿ ಫೇಸ್​​​ಬುಕ್​​​​ನಲ್ಲಿ ಹೇಳಿಕೆ ನೀಡಿದ್ದೇನೆ. ಆದರೆ ಇದನ್ನು ಸೃಷ್ಟಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಎಂದು ಆರ್​.ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಆರ್​​.ಆರ್ ನಗರ ಪೊಲೀಸ್ರು ಕಿಡಿಗೆಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv