ಸೈನಿಕರ ಕುಟುಂಬಕ್ಕೆ ನೆರವಾಗಲು ಧವನ್ ಮನವಿ..!

ಪುಲ್ವಾಮದಲ್ಲಿ ಪಾಕಿಸ್ತಾನ ಉಗ್ರರ ದಾಳಿ ಬಲಿಯಾದ ಸೈನಿಕರ ಕುಟುಂಬಕ್ಕೆ ಶಿಖರ್ ಧವನ್ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲದೇ ತಮ್ಮ ಅಭಿಮಾನಿಗಳಲ್ಲು ಈ ಬಗ್ಗೆ ಮನವಿ ಮಾಡಿದ್ದಾರೆ. ಟ್ವೀಟರ್​ನಲ್ಲಿ ವಿಡೀಯೋ ಪೋಸ್ಟ್ ಮಾಡಿರುವ ಧವನ್, ಇದೇ ಲಾಸ್ಟ್. ನಮ್ಮ ಕೈಯಿಂದ ಇಷ್ಟೇ ಮಾಡೋಕೆ ಸಾಧ್ಯ ಆಗೋದು. ಎಲ್ಲರು ದಯವಿಟ್ಟು ಯೋಧರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ. ಭಾರತೀಯ ಸೈನ್ಯದ ಪರವಾಗಿ ನಿಂತುಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಈಗಾಗಲೇ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರೀಡಾಪಟುಗಳು, ಯೋಧರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.