ಅತ್ತಿಬೆಲೆ ಹತ್ತಿರ ಚಿಪ್ಪು ಹಂದಿ ಪತ್ತೆ; ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಗ್ರಾಮಸ್ಥರು

ಆನೇಕಲ್ : ಆನೇಕಲ್ ವ್ಯಾಪ್ತಿಯ ಅತ್ತಿಬೆಲೆ ಹತ್ತಿರ ಚಿಪ್ಪು ಹಂದಿ ಪತ್ತೆಯಾಗಿದೆ. ಬೆಂಗಳೂರು-ಹೊಸೂರು ಹೆದ್ದಾರಿಯ ಗುಡ್ಡಟ್ಟಿ ಗ್ರಾಮಸ್ಥರಿಗೆ ಚಿಪ್ಪು ಹಂದಿ ಸಿಕ್ಕಿದೆ. ಬನ್ನೇರುಘಟ್ಟ ಆಭಯಾರಣ್ಯದಿಂದ ದಾರಿ ತಪ್ಪಿಸಿಕೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ರಾತ್ರಿ 8 ಗಂಟೆ ಸುಮಾರಿಗೆ ಚಿಪ್ಪು ಹಂದಿ ಗ್ರಾಮಸ್ಥರಿಗೆ ಸಿಕ್ಕಿದೆ. ಬಳಿಕ ಗ್ರಾಮಸ್ಥರು ಚಿಪ್ಪು ಹಂದಿಯನ್ನ ಆನೇಕಲ್ ವ್ಯಾಪ್ತಿಯ ಅರಣ್ಯಧಿಕಾರಿ ಯೋಗೆಶ್ವರ್​ಗೆ ಒಪ್ಪಿಸಿದ್ದಾರೆ.

ಇದೇ ವೇಳೆ, ಚಿಪ್ಪು ಹಂದಿ ಒಂದು ಅಪರೂಪದ ಪ್ರಾಣಿ. ಈ ಪ್ರಾಣಿ ನಮ್ಮಲ್ಲಿ ಸಿಗುವುದು ತುಂಬಾನೆ ಅಪರೂಪ ಅಂತಾ ಗ್ರಾಮಸ್ಥರಿಗೆ ಅರಣ್ಯಾಧಿಕಾರಿ ಯೋಗೆಶ್ವರ್ ಅಭಿನಂದನೆ ತಿಳಿಸಿದರು. ಇನ್ನು, ಚಿಪ್ಪು ಹಂದಿಯನ್ನ ನಾಳೆ ಬನ್ನೇರುಘಟ್ಟ ಅಭಯಾರಣ್ಯಕ್ಕೆ ರವಾನಿಸಲಿದ್ದಾರೆ.