ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್,​ ಸೌಜನ್ಯಕ್ಕೆ ಮಾರುಹೋದ ತರೂರ್

ತಿರುವನಂತಪುರಂ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​, ಸಂಸದ ಶಶಿ ತರೂರ್ ಅವರ ಆರೋಗ್ಯ ವಿಚಾರಿಸಿದ್ದಾರೆ. ನಿನ್ನೆ ತಿರುವನಂತಪುರಂನ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸುವ ವೇಳೆ ತಕ್ಕಡಿ ಕಳಚಿ ಬಿದ್ದು, ಶಶಿ ತರೂರ್ ಗಾಯಗೊಂಡಿದ್ದರು. ಅವರ ತಲೆಗೆ 8 ಹೊಲಿಗೆಗಳನ್ನ ಹಾಕಲಾಗಿದ್ದು, ಸದ್ಯ ತಿರುವನಂತಪುರಂನ ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ನಿರ್ಮಲಾ ಸೀತಾರಾಮನ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರ ಸೌಜನ್ಯತೆ ಶಶಿ ತರೂರ್ ಅವರ​​ ಮನ ಮುಟ್ಟಿದೆ.

ಈ ಹಿನ್ನೆಲೆ ಟ್ವೀಟ್​ ಮಾಡಿರೋ ತರೂರ್​, ನಿರ್ಮಲಾ ಸೀತಾರಾಮನ್​ ಅವರ ಸೌಜನ್ಯತೆ ನನ್ನ ಮನ ಮುಟ್ಟಿದೆ. ಕೇರಳದಲ್ಲಿ ಚುನಾವಣೆಯ ತೀವ್ರ ಒತ್ತಡದ ನಡುವೆಯೂ ಇಂದು ಬೆಳಗ್ಗೆ ಅವರು ಆಸ್ಪತ್ರೆಗೆ ಭೇಟಿ ನೀಡಿದ್ರು. ರಾಜಕೀಯದಲ್ಲಿ ಸೌಜನ್ಯತೆ ಅನ್ನೋದು ತುಂಬಾ ಅಪರೂಪದ ಸದ್ಗುಣ ಎಂದು ಬರೆದುಕೊಂಡಿದ್ದಾರೆ.

ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಫೋನ್​​ ಮಾಡಿ ನನ್ನ ಆರೋಗ್ಯ ವಿಚಾರಿಸಿದ್ದಾರೆ. ಅವರಿಗೆ ನನ್ನ ಹೃದ್ಪೂರ್ವಕ ಧನ್ಯವಾದ ಎಂದು ನಿನ್ನೆ ಶಶಿ ತರೂರ್​ ಟ್ವೀಟ್​ ಮಾಡಿದ್ದಾರೆ. ನನ್ನ ತಲೆಗೆ 8 ಹೊಲಿಗೆಗಳನ್ನ ಹಾಕಲಾಗಿದೆ. ಸದ್ಯ ಅಬ್ಸರ್​ವೇಷನ್​​ನಲ್ಲಿ ಇದ್ದೇನೆ. ನಾನು ಆರಾಮಾಗಿದ್ದೀನಿ ಅಂತ ತಿಳಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv