ಕಳಚಿತು ತುಲಾಭಾರದ ತಕ್ಕಡಿ, ಸಂಸದ ಶಶಿ ತರೂರ್​​ ತಲೆಗೆ ಗಾಯ, 6 ಹೊಲಿಗೆ

ತಿರುವನಂತಪುರಂ: ಕಾಂಗ್ರೆಸ್​​ ಸಂಸದ ಶಶಿ ತರೂರ್​​ ಕೇರಳದ ತಿರುವನಂತಪುರಂನಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ಗಾಂಧಾರಿ ಅಮ್ಮನ್​ ಕೋವಿಲ್  ದೇವಾಲಯದಲ್ಲಿ ಶಶಿ ತರೂರ್​​ ತುಲಾಭಾರ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಅವರು ಕುಳಿತಿದ್ದ ತಕ್ಕಡಿ ಕಳಚಿ ಬಿದ್ದಿದೆ. ಇದರಿಂದ ತರೂರ್​ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಅವರನ್ನು  ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ. ತರೂರ್​ ಅವರ ತಲೆಗೆ 6 ಹೊಲಿಗೆಗಳನ್ನ ಹಾಕಲಾಗಿದೆ. ಸದ್ಯ ಅವರು​ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಹಿಂದೆಯೂ ಕಝಕೊಟ್ಟಂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನ ಶಶಿ ತರೂರ್​​ ತುಲಾಭಾರ ಸೇವೆ ಸಲ್ಲಿಸಿದ್ದರು. ಬಾಳೆಹಣ್ಣುಗಳ ಸೇವೆ ಸಲ್ಲಿಸಿದ ನಂತರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv