ರಾಮ ಮಂದಿರ ನಿರ್ಮಾಣಕ್ಕಾಗಿ ಫೆ.21ರಂದು ಅಡಿಗಲ್ಲು

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಫೆಬ್ರವರಿ 21ರಂದು ಅಡಿಗಲ್ಲು ಹಾಕುವ ಕಾರ್ಯ ನಡೆಯಲಿದೆ ಎಂದು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ತಿಳಿಸಿದ್ದಾರೆ.

ಫೆಬ್ರವರಿ 17 ರಂದು ಪ್ರಯಾಗ್​​ರಾಜ್ ನಗರದಿಂದ ಹೊರಟು, ಫೆಬ್ರವರಿ 21 ರಂದು ಅಯೋಧ್ಯೆ ತಲುಪಲಿದ್ದೇವೆ. ಅಂದು ರಾಮ ಮಂದಿರ ನಿರ್ಮಾಣ ಮಾಡಲು ಅವರು ಭೂಮಿ ಪೂಜೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಕಾಂಬೋಡಿಯಾದ ಅಂಕೋರಾವಾಟ್​ ಸ್ಥಳದಲ್ಲಿರುವ ವಿಶಾಲ ಮಂದಿರದಂತೆ ಅಯೊಧ್ಯೆಯಲ್ಲಿ ಸುವಿಶಾಲ ರಾಮ ಮಂದಿರ ನಿರ್ಮಾಣ ಮಾಡಿ, ಆ ನಗರಕ್ಕೆ ವ್ಯಾಟಿಕನ್​ ಸಿಟಿಗೆ ಇರುವ ಸ್ಥಾನಮಾನದಂತಹ ಮಹತ್ವವನ್ನು ಕಲ್ಪಿಸುವುದು ನಮ್ಮ ಧ್ಯೇಯ ಎಂದು ಅವರು ಹೇಳಿದ್ದಾರೆ.

 Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv