ಕೆಟ್ಟದಾಗಿ ಬೌಲ್ ಮಾಡಿ ಅಂತಾ ವಾರ್ನ್​ಗೇ ಆಮಿಷ ಒಡ್ಡಿದ್ದನಂತೆ ಪಾಕ್ ಆಟಗಾರ

ಸ್ಪಿನ್​ ಮಾಂತ್ರಿಕ, ಆಷ್ಟ್ರೇಲಿಯಾ ಕ್ರಿಕೆಟ್​ನ ದಂತಕಥೆ ಶೇನ್​ ವಾರ್ನ್​ ಈಗ ಹೊಸ ಬಾಂಬ್​ ಸಿಡಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಓರ್ವ ತನಗೆ ಕೆಟ್ಟದಾಗಿ ಬೌಲಿಂಗ್​ ಮಾಡುವಂತೆ ಸುಮಾರು 2 ಲಕ್ಷ ಡಾಲರ್​ ಆಮಿಷ ಒಡ್ಡಿದ್ದ ಎಂದು ಆರೋಪಿಸಿದ್ದಾರೆ.

1994ರಲ್ಲಿ ಕರಾಚಿಯಲ್ಲಿ ನಡೆದಿದ್ದ ಆಷ್ಟ್ರೇಲಿಯಾ-ಪಾಕಿಸ್ತಾನ್​ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನಿ ಆಟಗಾರ ಸಲೀಂ ಮಲ್ಲಿಕ್​ ತನಗೆ ಕೆಟ್ಟದಾಗಿ ಬೌಲಿಂಗ್​ ಮಾಡಲು ಹೇಳಿದ್ದರು. ಅಲ್ಲದೇ, ‘ಒಂದು ವೇಳೆ ಪಂದ್ಯವೇನಾದ್ರು ಡ್ರಾದಲ್ಲಿ ಅಂತ್ಯಗೊಂಡರೆ ಕೇವಲ 30 ನಿಮಿಷದಲ್ಲಿ 2 ಲಕ್ಷ ಡಾಲರ್​ (ಸುಮಾರು 1.5 ಕೋಟಿ) ನಿಮ್ಮ ಡ್ರೆಸ್ಸಿಂಗ್​ ರೂಂನಲ್ಲಿರುತ್ತೆ’ ಅಂತಾ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದಾರೆ.

ಆದ್ರೆ, ಇದಕ್ಕೆ ವಾರ್ನ್​ ಒಪ್ಪಲಿಲ್ಲವಂತೆ. ಆದ್ರೂ ಪಾಕಿಸ್ತಾನ ಈ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್​ಗಳಿಂದ ಜಯಗಳಿಸಿತ್ತು..! ಹೀಗಾಗಿ, ಈ ಮ್ಯಾಚ್​ ಫಿಕ್ಸ್​ ಆಗಿತ್ತಾ? ಮತ್ತೆ ಯಾವೆಲ್ಲ ಆಟಗಾರರಿಗೆ ಪಾಕ್​​ ಕ್ರಿಕೆಟಿಗರು ಹಣ ನೀಡಿದ್ದರು? ಅನ್ನೋ ಪ್ರಶ್ನೆ ಈಗ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಒಟ್ಟಿನಲ್ಲಿ ಸರಿಯಾಗಿ ಆಟವಾಡಲೂ ಬಾರದ, ಸರಿಯಾಗಿ ಗೆಳೆತನ ನಿಭಾಯಿಸಲೂ ಬಾರದ, ಸುಳ್ಳು ಹೇಳುವುದನ್ನೇ ಸತ್ಯವನ್ನಾಗಿಸಿಕೊಂಡಿರೋ ಈ ಪಾಕಿಸ್ತಾನವೆಂಬೋ ದೇಶ ಹಾಗೂ ಇದರ ಆಟಗಾರರು ಇನ್ನೂ ಏನೇನೆಲ್ಲ ಕರ್ಮಕಾಂಡಗಳನ್ನು ಮಾಡಿದ್ದಾರೋ..?!

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv