‘ಲಿಂಗಾಯತ ಸಮುದಾಯದವ್ರನ್ನ ಕಡೆಗಣಿಸಿದರೆ ಮುಂದೆ ಅನುಭವಿಸ್ತಾರೆ’

ದಾವಣಗೆರೆ: ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ಕೊಟ್ಟರೆ ಕೊಡ್ಲೀ, ನಾನು ಭಿಕ್ಷೆ ಬೇಡಲು ಹೋಗಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸಚಿವ ಸ್ಥಾನ ಕುರಿತಂತೆ ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಬಗ್ಗೆ ನಾನು ಕೇಳಿಲ್ಲ, ಆಸೆ ಪಟ್ಟಿಲ್ಲ. ಫೋನ್ ಬಂದಿಲ್ಲಾ, ನಾನು ಯಾವ ಲೀಡರ್‌ನ್ನು ಕೇಳಿಲ್ಲ. ಎಂ.ಬಿ ಪಾಟೀಲ್‌ಗಾದರೂ ಕೊಡಲಿ ಯಾರಿಗಾದರೂ ಕೊಡಲಿ. ಸಚಿವ ಸ್ಥಾನದ ಬಗ್ಗೆ ದೆಹಲಿಗೆ ಹೋಗಿಲ್ಲ. ಲಿಂಗಾಯತ ಸಮುದಾಯದವರನ್ನು ಕಡೆಗಣಿಸಿದರೆ ಮುಂದೆ ಅನುಭವಿಸುತ್ತಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv