‘ಬಿಜೆಪಿಗೆ ಬಂದ್ರೆ ಡಿಸಿಎಂ ಮಾಡ್ತೀವಿ ಅಂದಿದ್ರು.. ನನಗೂ ಆಫರ್​​ ಬಂದಿತ್ತು..!‘

ದಾವಣಗೆರೆ : ಬಿಜೆಪಿಗೆ ಹೋದರೆ ಡಿಸಿಎಂ ಹುದ್ದೆ ಆಫರ್ ಇದೆ. ಆದ್ರೆ ನಾನು ಡಿಸಿಎಂ ಆಗಲ್ಲ, ಪಾರ್ಟಿನೂ ಬದಲಿಸಲ್ಲ ಅಂತಾ ಕಾಂಗ್ರೆಸ್​ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನೂ ಕರೀತಾನೆ, ಎಲ್ರೂ ಕರೀತಾರೆ! ಹೋಗೋರು ಬೇಕಲ್ಲ? ಬಿಜೆಪಿಗೆ ಹೋದರೆ ಡಿಸಿಎಂ ಹುದ್ದೆ ಕೊಡೋದಾಗಿ ಹೇಳಿದ್ದಾರೆ. ನಾನು ಡಿಸಿಎಂ ಆಗಲ್ಲ, ಪಾರ್ಟಿನೂ ಬದಲಿಸಲ್ಲ ಅಂತಾ ಶಾಮನೂರು ಸ್ವಷ್ಟಪಡಿಸಿದರು.

ಇದೇ ವೇಳೆ, ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಯ ಐದೂ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ನಾನು ಕೂಡಾ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದ್ದೇನೆ. ಎರಡೂ ಕಡೆ ಮೈತ್ರಿ ಅಭ್ಯರ್ಥಿಗಳ ಪರ ಉತ್ತಮ ಅಲೆ ಇದೆ. ಆದರೆ, ಬಿಜೆಪಿ ನಮ್ಮವರೇ ಗೆಲ್ಲುತ್ತಾರೆ ಎನ್ನುತ್ತಿದ್ದಾರೆ. ಮತ ಎಣಿಕೆ ದಿನ ಸ್ಪಷ್ಟ ಉತ್ತರ ಸಿಗಲಿದೆ ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv