ಶ್ರೀಗಳು ಶತಾಯುಷಿ ಆದಾಗ ಹಾಸ್ಟೆಲ್​ಗೆ 12 ಕೊಠಡಿ ನಿರ್ಮಿಸಿ ಕೊಟ್ಟಿದ್ದೆವು: ಶಾಮನೂರು

ದಾವಣಗೆರೆ: ಸಿದ್ದಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರ ಶ್ರೀಗಳು ಇಂದು ದೈವಾಧೀನರಾಗಿದ್ದಕ್ಕೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಶ್ರೀಗಳ ಅಗಲಿಕೆಗೆ ಮಾಜಿ ಶಾಸಕ ಶಾಮನೂರು ಶಿವಶಂಕರಪ್ಪ ಸಂತಾಪ ಸೂಚಿಸಿದ್ದಾರೆ.

ತ್ರಿವಿಧ ದಾಸೋಹಿಯನ್ನು ಕಳೆದುಕೊಂಡು ರಾಜ್ಯವೇ ಬಡವಾಗಿದೆ. ಸ್ವಾಮೀಜಿಗಳಿಗೆ ಈಗಲಾದರೂ ಕೇಂದ್ರ ಸರ್ಕಾರ ಭಾರತ ರತ್ನ ಘೋಷಣೆ ಮಾಡಲಿ. ಶ್ರೀಗಳು ನಮಗೆ ಯಾವಾಗಲು ಮಾರ್ಗದರ್ಶಕರಾಗಿದ್ದರು. ಶಿವಕುಮಾರ ಶ್ರೀಗಳು ಶತಾಯುಷಿ ಆದಾಗ ಹಾಸ್ಟೆಲ್​​ಗೆ 12 ಕೊಠಡಿಗಳ ನಿರ್ಮಿಸಿ ಕೊಟ್ಟಿದ್ದೆವು. ಶ್ರೀಗಳ 105 ವರ್ಷಗಳ ನೆನಪಿಗೆ ₹ 1.5 ಕೋಟಿ ಕಾಣಿಕೆ ನೀಡಿದ್ದೆವು ಎಂದು ಸ್ಮರಿಸಿದ್ದಾರೆ.