ಅಧಿಕಾರದಲ್ಲಿ ಯಾರು ಇರುತ್ತಾರೋ ಅವ್ರೇ ನನಗೆ ಸಿಎಂ: ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಅಧಿಕಾರದಲ್ಲಿ ಯಾರು ಇರುತ್ತಾರೋ ಅವರೇ ನನಗೆ ಸಿಎಂ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಿಗೆ ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಸಿ.ಸಿ. ರೋಡ್ ಮತ್ತು ಒಳಚರಂಡಿ ಜೊತೆಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಈಗ ಎಲ್ಲರೂ ಸಿಎಂ ಆಗ್ತಾ ಇದಾರೆ. ಇಡೀ ರಾಜ್ಯಕ್ಕೆ ಯಾರು ಅಧಿಕಾರದಲ್ಲಿ ಇರ್ತಾರೆ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು. ಇನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು ಪಕ್ಷ ಅವಕಾಶ ಕೊಟ್ರೆ ನಾನೇ ಸ್ಪರ್ಧಿಸುವೆ ಎಂದು ಲೋಕಸಭೆ ಚುಣಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ರು.