‘ನಾನು ಕೂಡ ಸಿಎಂ ಆಗ್ತೀನಿ’ ಶಾಮನೂರು ಶಿವಶಂಕರಪ್ಪ ಹೇಳಿಕೆ

ದಾವಣಗೆರೆ: ನಗರದಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಈಗಾಗಲೆ ದಾವಣಗೆರೆಯಲ್ಲಿ 40% ಜನ ಮತ ಚಲಾವಣೆ ಮಾಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಮತ ಚಲಾವಣೆ  ತುಂಬಾ ಮುಖ್ಯ. ಮೈತ್ರಿ ಸರಕಾರ ಪತನ ಏನೂ ಆಗಲ್ಲ. ಆದರೆ ಬಿಜೆಪಿಯವರು ಸರಕಾರ ಪತನ ಆಗುತ್ತೆ ಅಂತಾ ಹೇಳ್ತಾನೇ ಇರ್ತಾರೆ. ದಾವಣಗೆರೆಯಲ್ಲಿ ಎಲ್ಲಿ ನೋಡಿದರೂ ಕಾಂಗ್ರೆಸ್ ಆಗುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು. ಇನ್ನು ಸಿದ್ದರಾಮಯ್ಯ ಮತ್ತೇ ಸಿಎಂ ಆಗುತ್ತೇನೆ ಎಂದು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಮನೂರು, ಸಿದ್ದರಾಮಯ್ಯನವರು ಸಿಎಂ ಆದರೆ ಆಗಲಿ. ನಾನೂ ಕೂಡ ಸಿಎಂ ಆಗ್ತೀನಿ ಅಂತ ಹೇಳ್ತೀನಿ ಎಂದು ಹೇಳಿದ್ರು. ರಮೇಶ ಜಾರಕಿಹೊಳಿ ಮೊದಲೇ ಬಿಜೆಪಿಗೆ ಹೋಗೋ ಗಿರಾಕಿ, ಅಡ್ವಾನ್ಸ್ ತೆಗೆದುಕೊಂಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv