ಸರ್ವರ್​​ ಸಮಸ್ಯೆ: ಆರ್​ಟಿಒ ಗೇಟ್​​ ಬಂದ್​, ಪ್ರತಿಭಟನೆ

ಚಿತ್ರದುರ್ಗ: ಸರ್ವರ್​​ ಪ್ರಾಬ್ಲಂ ನೆಪವೊಡ್ಡಿ ವಾಹನ ನೋಂದಣಿ ಮಾಡದ ಹಿನ್ನೆಲೆ ಆಕ್ರೋಶಗೊಂಡ ವಾಹನ ಸವಾರರು ಆರ್​ಟಿಒ ಕಚೇರಿ ಗೇಟ್​ ಬಂದ್​​ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ವಾಹನ ಸವಾರರು ಸರದಿ ಸಾಲಿನಲ್ಲಿ ನೋಂದಣಿ ಮಾಡಿಸಲು ಬೆಳಗಿನಿಂದ ಕಾದಿದ್ದಾರೆ. ಆದರೆ ಅಧಿಕಾರಿಗಳು ಸರ್ವರ್​ ನೆಪ ಹೇಳಿ ನೋಂದಣಿ ಕಾರ್ಯವನ್ನು ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ. ಸರ್ವರ್​​ ಸಮಸ್ಯೆಯಿಂದ ಆಕ್ರೋಶಗೊಂಡ 500ಕ್ಕೂ ಹೆಚ್ಚು ವಾಹನ ಸವಾರರು ಕಚೇರಿಯಲ್ಲಿ ಯಾರೂ ಕೆಲಸ ಮಾಡದಂತೆ ತಡೆದು ಪ್ರತಿಭಟನೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv