ತುಮಕೂರು ನಗರದಲ್ಲಿ ಸರಣಿ‌ ಕಳ್ಳತನ

ತುಮಕೂರು: ತುಮಕೂರು ನಗರದಲ್ಲಿ ತಡರಾತ್ರಿ ನಗರದ ಗಂಗೋತ್ರಿ, ಎಸ್​ಎಸ್​ಪುರಂ ಬಡವಾಣೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.
ಬಟ್ಟೆ ಅಂಗಡಿ, ಮೆಡಿಕಲ್ ಸ್ಟೋರ್, ಫ್ಯಾನ್ಸಿ ಸ್ಟೋರ್, ಪತಂಜಲಿ ಮಾರಾಟ ಮಳಿಗೆಗಳ ಶೆಟರ್​ ಮುರಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಶೆಟರ್​ ಮುರಿದ ಕಳ್ಳರು ಬಟ್ಟೆ ಅಂಗಡಿ, ಮೆಡಿಕಲ್​ ಸ್ಟೋರ್​, ಫ್ಯಾನ್ಸಿ ಸ್ಟೋರ್​ಗಳಲ್ಲಿ ಇದ್ದ ವಸ್ತುಗಳ ಜೊತೆಗೆ ಅಂಗಡಿಗಳಲ್ಲಿದ್ದ ನಗದು ಹಣವನ್ನು ದೋಚಿದ್ದಾರೆ. ಪತಂಜಲಿ ಮಾರಾಟ ಮಳಿಗೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಹೊಸಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv