ಅಂಗಡಿ ಶಟರ್​​ ಮುರಿದು ಸರಣಿ ಕಳ್ಳತನ: ಮದ್ಯ,ಹಣ ದೋಚಿದ ಖದೀಮರು

ಚಿಕ್ಕಮಗಳೂರು: ಅಂಗಡಿಗಳ ಶಟರ್ ಮುರಿದು ಸರಣಿಗಳ್ಳತನ ಮಾಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ನಗರದ ಕೆ.ಎಂ ರಸ್ತೆಯಲ್ಲಿರುವ ಸುದರ್ಶನ್ ವೈನ್‌ಶಾಪ್, ಎಸ್‌ಬಿಜಿ ಬಾರ್, ಶಿಫಾ ಮೆಡಿಕಲ್ ಶಾಪ್‌ಗಳ ಶೆಟರ್ ಮುರಿದು ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು, ಮದ್ಯ, ಮತ್ತು ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv