ಲಾರಿಯ ಟೈರ್​ ಸ್ಫೋಟಗೊಂಡು ಸರಣಿ ಅಪಘಾತ, ಮೂವರ ಸಾವು..!

ಚಿತ್ರದುರ್ಗ: ಚಲಿಸುತ್ತಿದ್ದ ಈಚರ್ ಲಾರಿಯ ಟೈರ್ ಸ್ಫೋಟಗೊಂಡು ರಸ್ತೆ ಬದಿ ನಿಂತಿದ್ದ ಟಿಟಿ ವಾಹನಕ್ಕೆ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನ ಕಾರ್ತಿಕ್(25), ಶ್ರೀನಿಧಿ(20) ಹರ್ಷ ಗೌಡ(20) ಎಂದು ಗುರುತಿಸಲಾಗಿದೆ. ನಗರದ ಜೆಎಂಐಟಿ ಸರ್ಕಲ್​ನಲ್ಲಿ ಇಂದು ಬೆಳಗಿನಜಾವ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ 13 ಸ್ನೇಹಿತರ ತಂಡ ಗೋಕರ್ಣ ಪ್ರವಾಸ ಮುಗಿಸಿ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ. ಮೃತರು ಬೆಂಗಳೂರು ನಿವಾಸಿಗಳಾಗಿದ್ದು, ಇದೇ 19 ರಂದು ಗೋಕರ್ಣಕ್ಕೆ ಪ್ರವಾಸ ಹೋಗಿದ್ದರು. ಲಾರಿ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಸಂಚಾರಿ ಪಿಎಸ್​​ಐ ರೇವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv