ನವಯುಗ ಟೋಲ್​ಗೇಟ್​ ಬಳಿ ಸರಣಿ ಅಪಘಾತ: ಇಬ್ಬರ ದುರ್ಮರಣ

ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ನವಯುಗ ಟೋಲ್ ಬಳಿ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಟೋಲ್​ ಪಾವತಿಸಲು ನಿಂತಿದ್ದ 3 ಕಾರುಗಳಿಗೆ ಹಿಂದಿನಿಂದ ಬಂದ ಕ್ಯಾಂಟರ್​ ಏಕಾಏಕಿ ಗುದ್ದಿದ ಪರಿಣಾಮ ಆಲ್ಟೋ, ಒಮ್ನಿ ಹಾಗೂ ಐ20 ಕಾರುಗಳು ಜಖಂಗೊಂಡಿವೆ. ಮಾರುತಿ ಆಲ್ಟೋ ಕಾರಿನಲ್ಲಿದ್ದ ಗುರುದೇವ್ (37) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಮ್ನಿ ಕಾರಿನಲ್ಲಿದ್ದ ಜಯಕುಮಾರ್ (42) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಐ20 ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ಅವರನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಕುಮಾರ್​ ಬೆಂಗಳೂರಿನ ಶಾಸ್ತ್ರಿ ನಗರದ ನಿವಾಸಿ ಎಂದು ತಿಳಿದುಬಂದಿದೆ. ಕ್ಯಾಂಟರ್​ ಚಾಲಕ ಕುಡಿದು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಕ್ಯಾಂಟರ್​ ಚಾಲಕನನ್ನ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ನೆಲಮಂಗಲ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *