ಪಂಚತಂತ್ರ ಸೀಕ್ವೆಲ್​ಗೆ ಭಟ್ರು ಹೊಸ ಮಂತ್ರ..!

ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ದೇಶ ವಿದೇಶಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಯಂಗ್ ಅಂಡ್ ಓಲ್ಡ್​ ಜನರೇಷನ್​ನ ಮಾಡ್ರನ್ ಪಂಚತಂತ್ರಕ್ಕೆ ಸಿನಿ ಪ್ರೇಕ್ಷಕರೆಲ್ಲಾ ಜೈ ಅಂದಿದ್ದಾರೆ. ಇದೀಗ ಚಿತ್ರ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಕೂಡ ಆಗ್ತಿದೆ. ವಿಶೇಷ ಅಂದ್ರೆ ಚಿತ್ರ ಯಶಸ್ವಿ 25 ನೇ ದಿನದತ್ತ ಮುನ್ನುಗುತ್ತಿದ್ದು ಇದರ ನಡುವೆ ಭಟ್ರು ಪಂಚತಂತ್ರ ಪಾರ್ಟ್​- 2 ಮಾಡೋಕೆ ಪ್ಲಾನ್ ನಡೆಸಿದ್ದಾರೆ.

ತ್ರಿಭಾಷೆಯಲ್ಲಿ ಪಂಚತಂತ್ರ ಸೀಕ್ವೆಲ್..!
ಮೊದಲ ಪಂಚತಂತ್ರ ಕನ್ನಡದಲ್ಲಿ ತೆರೆಕಂಡು ಸಾಂಗ್ ಮತ್ತು ಕ್ಯಾಚಿ ಡೈಲಾಗ್​ನಿಂದ ಅಭಿಮಾನಿಗಳ ಮನತಣಿಸಿತ್ತು. ಇದೀಗ ಪಂಚತಂತ್ರ-2 ಕನ್ನಡ ಸೇರಿದಂತೆ ತಮಿಳು, ತೆಲುಗಿನಲ್ಲಿ ಏಕ ಕಾಲದಲ್ಲಿ ಮೂಡಿ ಬರಲಿದೆಯಂತೆ. ಸಿನಿಮಾದಲ್ಲಿ ಬಹುತೇಕ ಇದೇ ಪಂಚತಂತ್ರ ಟೀಮ್ ಇರಲಿದ್ದು ಕೆಲವೂ ಹೊಸ ತಾರೆಗಳು ಸೇರ್ಪಡೆಯಾಗೋ ಸಾಧ್ಯತೆ ಇದೆ. ಸದ್ಯ ಯೋಗರಾಜ್ ಭಟ್ರು ‘ಗಾಳಿಪಟ-2’ ಹಾಗೂ ಶಿವರಾಜ್ ಕುಮಾರ್ ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಪಂಚತಂತ್ರ ಸೀಕ್ವೆಲ್​ಗೆ ಕೈಹಾಕಲಿದ್ದಾರೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸೀಕ್ವೆಲ್ ಸಿನಿಮಾಗಳ ಅಬ್ಬರ ಜೋರಾಗಿದ್ದು ಭಟ್ರು ಕೂಡ ಧಮಾಕ ಸೃಷ್ಟಿಸೋಕೆ ರೆಡಿಯಾಗಿದ್ದಾರೆ. ಚಿತ್ರಕ್ಕೆ ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಾದ್ಕರ್ ಬಂಡವಾಳ ಹೂಡಲಿದ್ದು ಭಟ್ರು ಕೈಯಲ್ಲಿ ಎರಡನೇ ಪಂಚತಂತ್ರ ಹೇಗೆಲ್ಲಾ ಇರುತ್ತೇ ಅನ್ನೋದನ್ನ ಕಾದು ನೋಡಬೇಕಿದೆ.