ಆಶ್ರಮದಲ್ಲಿ ಕೊಲೆ ಪ್ರಕರಣ: ಬಾಬಾ ರಾಮ್​ಪಾಲ್ ದೋಷಿ

ನವದೆಹಲಿ: ಕೊಲೆ ಆರೋಪದಡಿ ಬಂಧನಕ್ಕೊಳಗಾಗಿರುವ ಹರಿಯಾಣದ ಸ್ವಯಂ ಘೋಷಿತ ದೇವಮಾನವ, ಸತ್​ಲೋಕ್​ ಆಶ್ರಮದ ಮುಖ್ಯಸ್ಥ ಬಾಬಾ ರಾಮ್​ಪಾಲ್​ ಪ್ರಕರಣದ ತೀರ್ಪು ಹೊರಬಿದ್ದಿದೆ. ಎರಡೂ ಕೊಲೆ ಪ್ರಕರಣದಲ್ಲಿ ಬಾಬಾ ರಾಮ್​ಪಾಲ್​ ದೋಷಿ ಎಂದು ಹರಿಯಾಣದ ಹಿಸಾರ್​​ ಕೋರ್ಟ್​ ತೀರ್ಪು ನೀಡಿದೆ. ಅಕ್ಟೋಬರ್​ 16ರಂದು  ಕೋರ್ಟ್​​​ ರಾಮ್​​ಪಾಲ್​​​ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಏನಿದು ಪ್ರಕರಣ?

2014ರ ನವೆಂಬರ್​ 14ರಂದು, ಬಾರ್ವಾಲಾದ ಸತ್​​ಲೋಕ್​ ಆಶ್ರಮದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಸಾವನ್ನಪ್ಪಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಮ್​ಪಾಲ್ ಹಾಗೂ ಅವರ 27 ಭಕ್ತರ ಮೇಲೆ ಕೊಲೆ ಹಾಗೂ ಅಕ್ರಮ ಬಂಧನದ ಆರೋಪದಡಿ ಕೇಸ್​ ದಾಖಲಾಗಿತ್ತು. ಬಳಿಕ ರಾಮ್​ಪಾಲ್ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಘರ್ಷಣೆಯಾಗಿ, ಪೊಲೀಸರು ರಾಮ್​ಪಾಲ್​​ರನ್ನು ಬಂಧಿಸಿದ್ದರು. ಹಾಗೇ ನವೆಂಬರ್​ 18ರಂದು ಆಶ್ರಮದಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದಾಗ ರಾಮ್​ಪಾಲ್​ ಹಾಗೂ ಭಕ್ತರ ವಿರುದ್ಧ ಎರಡನೇ ಕೇಸ್​ ದಾಖಲಾಗಿತ್ತು. ಈ ಪ್ರಕರಣಗಳ ವಿಚಾರಣೆ ವೇಳೆ,  ಸಂತ್ರಸ್ತರ ಪೋಸ್ಟ್​ ಮಾರ್ಟಮ್​​ ನಡೆಸಿದ್ದ ವೈದ್ಯರು ಸೇರಿದಂತೆ ಒಟ್ಟು 80 ವಿಟ್​​ನೆಸ್​​ಗಳು ಕೋರ್ಟ್​​ಗೆ ಹಾಜರಾಗಿದ್ದರು.