ಸೀತಾರಾಮ ಕಲ್ಯಾಣ ಹುಬ್ಬಳ್ಳಿಯಲ್ಲಲ್ಲ, ಮೈಸೂರಿನಲ್ಲಿ!

ಸೂಪರ್ ಮೇಕಿಂಗ್, ಭರ್ಜರಿ ಫೈಟಿಂಗ್, ಬಿಗ್ ಸ್ಟಾರ್ ಕಾಸ್ಟ್, ಅದ್ಭುತ ಕತೆ ಇಟ್ಕೊಂಡು ತೆರೆಗೆ ಬರುತ್ತಿರೋ ಸಿನಿಮಾ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮಕಲ್ಯಾಣ ಸಿನಿಮಾ. ಇದೇ ತಿಂಗಳು 25ಕ್ಕೆ ತೆರೆಗೆ ಬರೋಕೆ ಸಿದ್ಧವಾಗಿರೋ ಚಿತ್ರದ ಪ್ರಿ ರಿಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ನಡೆಯಬೇಕಿತ್ತು. ಆದ್ರೆ ಈಗ ಹುಬ್ಬಳ್ಳಿ ಬದಲು ಮೈಸೂರಿನಲ್ಲಿ ಇದೇ ತಿಂಗಳ 19ಕ್ಕೆ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹುಬ್ಬಳ್ಳಿಯಲ್ಲಾಗಬೇಕಿದ್ದ ಕಾರ್ಯಕ್ರಮ ಈಗ ಮೈಸೂರಿನಲ್ಲೇಕೆ?
ಹೇಳಿಕೇಳಿ ನಿಖಿಲ್ ಕುಮಾರಸ್ವಾಮಿಯರದ್ದು ರಾಜಕೀಯದಲ್ಲೇ ಸಕ್ರಿಯವಾಗಿರೋ ಕುಟುಂಬ. ನಿಖಿಲ್‌ ಅವರ ತಂದೆ ಕರ್ನಾಟಕ ಮುಖ್ಯಮಂತ್ರಿಯವರ ಮೂಲ ಹಾಗೂ ಜನಪ್ರಿಯರಾಗಿರೋದು ಮೈಸೂರು, ಮಂಡ್ಯ, ರಾಮನಗರ ಈ ಭಾಗದಲ್ಲೇ. ಹೀಗಾಗೇ ತಮ್ಮೂರಿನ ಮೇಲೆ ಅಪಾರ ಅಭಿಮಾನ ಹಾಗೂ ಅಲ್ಲಿನ ಅಪಾರ ಸಂಖ್ಯೆಯ ಅಭಿಮಾನಿಗಳಿಗೋಸ್ಕರವೇ ಮೊದಲು ಹುಬ್ಬಳ್ಳಿಯಲ್ಲಿ ನಡೆಯೋಕೆ ಆಯೋಜಿಸಿದ್ದ ಕಾರ್ಯಕ್ರಮವನ್ನ ಈಗ ಮೈಸೂರಿನಲ್ಲಿ ನಡೆಸಲು ವೇದಿಕೆ ಸಿದ್ಧವಾಗಿದೆ. ಈ ಹಿಂದೆ ಚಿತ್ರದ ಟೀಸರ್‌ ರಿಲೀಸ್‌ ಕಾರ್ಯಕ್ರಮ ಕೂಡ ರಾಮನಗರದಲ್ಲಿ ನಡೆದಿತ್ತು.

ಸಂಕ್ರಾಂತಿಗೆ ರಿಲೀಸ್​ ಅಗ್ತಾ ಇದೆ ಮತ್ತೊಂದು ಹಾಡು..!

ಎ. ಹರ್ಷ ನಿರ್ದೇಶನದ ಚಿನ್ನಾಂಬಿಕಾ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಜಯಣ್ಣ ಕಂಬೈನ್ಸ್​ ತಗೊಂಡಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ ಸಂಯೋಜನೆ, ಜೆ ಸ್ವಾಮಿ ಛಾಯಾಗ್ರಾಹಣವಿರಲಿದೆ. ನಿಖಿಲ್, ರಚಿತಾರಾಮ್ ಜೊತೆಗೆ ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ, ಆದಿತ್ಯ ಮೆನನ್, ಜ್ಯೋತಿ ರೈ, ನಯನ, ಶಿವರಾಜ್ ಕೆ.ಆರ್ ಪೇಟೆ, ಜೀವನ್, ವೀಣಾ ಪೊನ್ನಪ್ಪ, ರವಿ ಭಟ್, ಸವಿತಾ, ಗಿರೀಶ್ ಜತ್ತಿ, ಹರೀಶ್, ಸಂಜು ಬಸ್ಯ ಸೇರಿದಂತೆ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ಇನ್ನೂ ಚಿತ್ರಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ನಾಳೆ ಚಿತ್ರದ ಮಾಂಗಲ್ಯಂ ತಂತು ನಾನೇನ ಅನ್ನೋ ಹಾಡು ರಿಲೀಸ್ ಆಗ್ತಿದೆ. ಈಗಾಗ್ಲೇ ನಿನ್ನ ರಾಜ ನಾನು ನನ್ನ ರಾಣಿ ನೀನು ಹಾಡು ಹಿಟ್‌ ಆಗಿದ್ದು ಈ ಹಾಡು ಹೇಗಿರಲಿದೆ ಅನ್ನೋ ನಿರೀಕ್ಷೆ ಇದೆ.